ತಿರುವನಂತಪುರಂ: ಕೇರಳದ ಎರ್ನಾಕುಳಂ ಬಳಿ ಕಳಮಶ್ಶೇರಿ ಎಂಬಲ್ಲಿ ಭಾನುವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ಬೆಳಿಗ್ಗೆ ಸರ್ವಪಕ್ಷಗಳ ಸಭೆ ನಡೆಸಿದ್ದಾರೆ.
ಸಚಿವಾಲಯದ ಸಭಾಂಗಣದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಅನೇಕ ಪಕ್ಷಗಳ ಮುಖಂಡರು ಭಾಗಿಯಾಗಿದ್ದಾರೆಂದು ತಿಳಿದು ಬಂದಿದೆ.
ಕ್ರೈಸ್ತ ಸಮುದಾಯದವರು ಕಳಮಶ್ಶೇರಿ ಕನ್ವನ್ಷನ್ ಸೆಂಟರ್‌ನಲ್ಲಿ ಪ್ರಾರ್ಥನಾ ಸಭೆ ನಡೆಸುತ್ತಿದ್ದಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಇಬ್ಬರು ಮಹಿಳೆಯರು ಹಾಗೂ ಒಬ್ಬ ಬಾಲಕಿ ಸತ್ತಿದ್ದಾರೆ. ಈ ಬಾಂಬ್ ಸ್ಪೋಟಕ್ಕೆ ಅಧಿಕೃತ ಕಾರಣ ಏನು? ಹೊಣೆ ಯಾರದ್ದು ಎಂಬುದನ್ನು ಕೇರಳ ಪೊಲೀಸರು ಇದುವರೆಗೆ ಬಹಿರಂಗಪಡಿಸಿಲ್ಲ.