ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಎನ್‌ಕೌಂಟರ್ ಮಾಡುವುದಾಗಿ ಜೀವ ಬೆದರಿಕೆ ಪತ್ರ: ಪ್ರಿಯಾಂಕ್ ಖರ್ಗೆ

Published 28 ಮಾರ್ಚ್ 2024, 6:58 IST
Last Updated 28 ಮಾರ್ಚ್ 2024, 6:58 IST
ಅಕ್ಷರ ಗಾತ್ರ

ಕಲಬುರಗಿ: 'ಬಿಜೆಪಿಯ ಮನುವಾದಿಗಳು ನನ್ನನ್ನು ಎನ್‌ಕೌಂಟರ್ ಮಾಡುವುದಾಗಿ ಜೀವ ಬೆದರಿಕೆಯ ಪತ್ರ ಬರೆದು ಹತ್ತು ದಿನಗಳ ಹಿಂದೆ ನನ್ನ ಕಚೇರಿಗೆ ಕಳುಹಿಸಿದ್ದಾರೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕೆಲವು ಕೆಟ್ಟ ಪದಗಳನ್ನು ಬಳಸಿ ನನ್ನ ಕುಟುಂಬ ಸದಸ್ಯರನ್ನು ನಿಂದಿಸಿದ್ದಾರೆ. ಜಾತಿ ಹೆಸರನ್ನು ಸಹ ಉಲ್ಲೇಖ ಮಾಡಿದ್ದಾರೆ. ಕಲಬುರಗಿಯಿಂದ ಬೆಂಗಳೂರಿನ ವಿಕಾಸಸೌಧದ ನನ್ನ ಕಚೇರಿಗೆ ಪತ್ರ ಬಂದಿದೆ. ವಿಧಾನಸೌಧದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ' ಎಂದರು.

'ಬಿಜೆಪಿಯ ಮುಖಂಡರು ನನ್ನ ಶವದ ಮೇಲೆ ಚುನಾವಣೆ ನಡೆಸಲು ಸಜ್ಜಾಗಿದ್ದಾರೆ' ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT