ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಗುರುವಾರ ಫೋನ್ ಮೂಲಕ ಮಾತುಕತೆ ನಡೆಸಿದರು. ಈ ವೇಳೆ ‘ಇರಾನ್ ಮತ್ತು ಬೆಂಬಲಿತ ಬಂಡುಕೋರ ಗುಂಪುಗಳಿಂದ ಎದುರಾಗುವ ಎಲ್ಲಾ ರೀತಿಯ ಬೆದರಿಕೆಗಳಿಗೆ ಪ್ರತಿಯಾಗಿ ಇಸ್ರೇಲ್ ರಕ್ಷಿಸಲು ಬದ್ಧ’ ಎಂದು ಒತ್ತಿ ಹೇಳಿದರು.