ಶನಿವಾರ, ಜುಲೈ 31, 2021
20 °C

2020ರಲ್ಲಿ ವಿದೇಶಗಳಲ್ಲಿ 11,430 ಭಾರತೀಯರ ಸಾವು: ವಿದೇಶಾಂಗ ಸಚಿವಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಹೊರ ದೇಶಗಳಲ್ಲಿ 2020ನೇ ಸಾಲಿನಲ್ಲಿ 11,439 ಭಾರತೀಯರು ಮೃತಪಟ್ಟಿದ್ದಾರೆ. ಮುಂಬೈ ಮೂಲದ ಕಾರ್ಯಕರ್ತ ಜತಿನ್‌ ದೇಸಾಯಿ ಅವರ ಆರ್‌ಟಿಐ ಅರ್ಜಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಮಾಹಿತಿಯನ್ನು ನೀಡಿದೆ.

ಸೌದಿ ಅರೇಬಿಯದಲ್ಲಿ ಗರಿಷ್ಠ ಅಂದರೆ 3,753 ಭಾರತೀಯರು ಮೃತಪಟ್ಟಿದ್ದಾರೆ.

ಉಳಿದಂತೆ, ಯುಎಇಯಲ್ಲಿ 2,454, ಅಮೆರಿಕದಲ್ಲಿ 280, ಕುವೈತ್‌ನಲ್ಲಿ 1,279, ಇಟಲಿಯಲ್ಲಿ 216, ಬ್ರಿಟನ್‌ನಲ್ಲಿ 41, ಸ್ವಿಟ್ಜರ್‌ಲೆಂಡ್‌ನಲ್ಲಿ 12, ಸೂಡಾನ್‌ನಲ್ಲಿ 40, ಸಿಂಗಪುರದಲ್ಲಿ 166 ಮತ್ತು ಕತಾರ್‌ನಲ್ಲಿ 385 ಮಂದಿ ಭಾರತೀಯರು ಮೃತಪಟ್ಟಿದ್ದಾರೆ ಎಂದು ಸಚಿವಾಲಯದ ನಿರ್ದೇಶಕ (ಸಿಪಿವಿ) ಉತ್ತರ ನೀಡಿದ್ದಾರೆ.

ಕಾರಾಗೃಹಗಳಲ್ಲಿ ಇದ್ದವರಲ್ಲಿ ಇಟಲಿ, ಭೂತಾನ್‌ನಲ್ಲಿ ತಲಾ ಇಬ್ಬರು ಹಾಗೂ ಬಾಂಗ್ಲಾದೇಶ, ಇಂಡೊನೇಷ್ಯಾ, ಮಾಲಿ,ಮ್ಯಾನ್ಮಾರ್, ಥಾಯ್ಲೆಂಡ್‌ ಮತ್ತು ಬ್ರಿಟನ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು