ಮಂಗಳವಾರ, ಮಾರ್ಚ್ 21, 2023
29 °C

ಕೇರಳ: 6 ತಿಂಗಳಲ್ಲಿ 140 ಹದಿಹರೆಯದವರ ಆತ್ಮಹತ್ಯೆ; ವರದಿಗೆ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕ್ಷುಲ್ಲಕ ಕಾರಣದಿಂದಾಗಿ ಕೇರಳದಲ್ಲಿ ಆರು ತಿಂಗಳಲ್ಲಿ 140 ಹದಿಹರೆಯದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. 

ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್‌ಎಚ್‌ಆರ್‌ಸಿ) ಆತ್ಮಹತ್ಯಾ ನಿಯಂತ್ರಣ ಕ್ರಮಗಳ ಪರಿಣಾಮಕಾರಿತ್ವದ ಕುರಿತು ವರದಿ ಸಲ್ಲಿಸುವಂತೆ ಸಾಮಾಜಿಕ ನ್ಯಾಯ ಇಲಾಖೆಗೆ ನಿರ್ದೇಶನ ನೀಡಿದೆ.  

‘ದೀಶಾ’ ಸ್ವಯಂ ಸೇವಾ ಸಂಸ್ಥೆ ಈ ಅಧ್ಯಯನ ನಡೆಸಿದ್ದು, ‘ಕೌಟುಂಬಿಕ ಸಮಸ್ಯೆ, ಪ್ರೇಮ ವೈಫಲ್ಯ, ಪರೀಕ್ಷೆಗಳಲ್ಲಿ ಅನುತ್ತೀರ್ಣ, ಮೊಬೈಲ್‌ ಫೋನ್‌ ಮತ್ತು ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಮನೆಯವರ ಜೊತೆಗಿನ ಜಗಳವೇ ಯುವಜನಾಂಗ ಆತ್ಮಹತ್ಯೆಗೆ ಮುಂದಾಗಲು ಕಾರಣವಾಗುತ್ತಿದೆ’ ಎಂದು ತಿಳಿಸಿದೆ.

‘ಕಳೆದ ಜನರಿಯಿಂದ ಜೂನ್‌ ತಿಂಗಳವರೆಗೆ 13ರಿಂದ 18 ವರ್ಷದೊಳಗಿನ 140 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಎನ್‌ಜಿಒ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು