ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ಮತಗಟ್ಟೆಯಲ್ಲಿ ಅಕ್ರಮ ಸಾಧ್ಯತೆ: ಇದ್ದದ್ದು 90 ಮತ, ಚಲಾವಣೆ 181

ಅಧಿಕಾರಿಗಳ ಅಮಾನತು
Last Updated 5 ಏಪ್ರಿಲ್ 2021, 20:11 IST
ಅಕ್ಷರ ಗಾತ್ರ

ಹಫ್ಲಾಂಗ್ (ಅಸ್ಸಾಂ): ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಮತಗಟ್ಟೆ ಒಂದರಲ್ಲಿ 90 ಅರ್ಹ ಮತದಾರರು ಇದ್ದಾರೆ. ಆದರೆ ಅಲ್ಲಿ 181 ಮಂದಿ ಮತ ಚಲಾಯಿಸಿದ್ದಾರೆ. ಆ ಮತಗಟ್ಟೆಯ 6 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಚುನಾವಣಾ ಆಯೋಗವು ಹೇಳಿದೆ.

ಜಿಲ್ಲೆಯ ಹಫ್ಲಾಂಗ್ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 107 (ಎ)ಯಲ್ಲಿ ಏಪ್ರಿಲ್‌ 1ರಂದು ಮತದಾನ ನಡೆದಿತ್ತು. ಕ್ಷೇತ್ರದಲ್ಲಿ ಅಂದು ಶೇ 74ರಷ್ಟು ಮತದಾನ ದಾಖಲಾಗಿತ್ತು. ಈಗ ಹೆಚ್ಚುವರಿ ಮತಗಳು ಚಲಾವಣೆ ಆಗಿರುವ ಕಾರಣ, ಕ್ಷೇತ್ರದಲ್ಲಿ ಭಾರಿ ಅಕ್ರಮ ನಡೆದಿರುವ ಸಾಧ್ಯತೆ ಇದೆ ಎಂದು ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ.

‘ಮತಗಟ್ಟೆಯ ಅಧಿಕಾರಿಗೆ ನೀಡಿದ್ದ ಮತದಾರರ ಪಟ್ಟಿಯಲ್ಲಿ 90 ಜನರ ಹೆಸರಷ್ಟೇ ಇತ್ತು. ಆ ಊರಿನ ಮುಖಂಡ ಬಂದು, 181 ಜನರ ಹೆಸರು ಇರುವ ಮತದಾರರ ಪಟ್ಟಿಯನ್ನು ತೋರಿಸಿದ್ದಾರೆ. ಅವರೆಲ್ಲರಿಗೂ ಮತದಾನ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ಅವರ ಒತ್ತಾಯಕ್ಕೆ ಅಧಿಕಾರಿಗಳು ಏಕೆ ಮಣಿದರು ಎಂಬುದು ಗೊತ್ತಿಲ್ಲ. ಮತಗಟ್ಟೆಯಲ್ಲಿದ್ದ ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಆಗಿರುವ ಲೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಚುನಾವಣಾ ಆಯೋಗವು ಹೇಳಿದೆ.

ಅಧಿಕಾರಿಗಳನ್ನು ಏಪ್ರಿಲ್ 2ರಂದೇ ಅಮಾನತು ಮಾಡಲಾಗಿದೆ. ಆದರೆ, ಈ ವಿಚಾರ ಈಗಷ್ಟೇ ಬೆಳಕಿಗೆ ಬಂದಿದೆ. ಅಲ್ಲದೆ, ಈ ಮತಗಟ್ಟೆಯಲ್ಲಿ ಮರುಮತದಾನ ನಡೆಸಲಾಗುತ್ತದೆ ಎಂದು ಮೂಲಗಳು ಹೇಳಿವೆ. ಆದರೆ, ಈ ಬಗ್ಗೆ ಅಧಿಕೃತ ಆದೇಶ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT