ಮಂಗಳವಾರ, ನವೆಂಬರ್ 24, 2020
22 °C

ಉತ್ತರ ಪ್ರದೇಶದ ಫತೇಪುರದಲ್ಲಿ ದಲಿತ ಸೋದರಿಯರ ಕೊಲೆ: ಕೊಳದಲ್ಲಿ ದೇಹಗಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫತೇಪುರ: ಉತ್ತರ ಪ್ರದೇಶ ಫತೇಪುರ ಜಿಲ್ಲೆಯ ಅಸೋತರ್ ಎಂಬಲ್ಲಿನ ಇಬ್ಬರು ಅಪ್ರಾಪ್ತ ದಲಿತ ಸಹೋದರಿಯರನ್ನು ಕೊಲ್ಲಲಾಗಿದೆ. ಅವರ ದೇಹಗಳನ್ನು ಕೊಳದಲ್ಲಿ ಎಸೆಯಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

'ಇಬ್ಬರೂ ಹೆಣ್ಣುಮಕ್ಕಳು ಗ್ರಾಮದ ದಿಲೀಪ್ ಧೋಬಿ ಎಂಬುವರ ಪುತ್ರಿಯರಾದ ಸುಮಿ (12) ಮತ್ತು ಕಿರಣ್ (8) ಎಂದು ಗುರುತಿಸಲಾಗಿದೆ. ಬಾಲಕಿಯರ ಕಣ್ಣುಗಳ ಬಳಿ ಗಾಯದ ಗುರುತುಗಳು ಕಂಡು ಬಂದಿದೆ. ಸೋಮವಾರ ಸಂಜೆ ಹೊತ್ತಿಗೆ ಅವರ ದೇಹಗಳನ್ನು ಕೊಳದಿಂದ ಹೊರತೆಗೆಯಲಾಯಿತು,' ಎಂದು ಎಎಸ್ಪಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.

ಸೋದರಿಯರು ತರಕಾರಿ ತರಲೆಂದು ಭಾನುವಾರ ತೋಟಕ್ಕೆ ತೆರಳಿದ್ದರು. ಆದರೆ, ಅವರು ಮನೆಗೆ ವಾಪಸ್‌ ಬಂದಿರಲಿಲ್ಲ.

ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ನಂತರ ದುಷ್ಕರ್ಮಿಗಳು ಕೊಂದಿದ್ದಾರೆ ಎಂದು ಸಂತ್ರಸ್ತ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು