ಶುಕ್ರವಾರ, ನವೆಂಬರ್ 27, 2020
20 °C
ಆರು ತಿಂಗಳಲ್ಲಿ ಶಾಸಕರಾಗಲು ಸಾಧ್ಯವಾಗದ ಹಿನ್ನೆಲೆ

ಮಧ್ಯಪ್ರದೇಶ: ಇಬ್ಬರು ಸಚಿವರ ರಾಜೀನಾಮೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್‌: ಸಚಿವರಾಗಿ ಆರು ತಿಂಗಳಾದರೂ ವಿಧಾನಸಭೆಯ ಸದಸ್ಯರಾಗಲು ಸಾಧ್ಯವಾಗದ ಕಾರಣ ತುಳಸಿರಾಮ್‌ ಸಿಲಾವತ್‌ ಮತ್ತು ಗೋವಿಂದ್‌ ರಜಪೂತ್‌ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಇಬ್ಬರೂ ನ.3 ರಂದು ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆಯ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಸದ್ಯ ಅವರಿಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಸಂವಿಧಾನದ ವಿಧಿ 164(4)ರ ಪ್ರಕಾರ ರಾಜ್ಯ ವಿಧಾನಸಭೆಯ ಸದಸ್ಯತ್ವವನ್ನು ಹೊಂದಿರದ ಸಚಿವರು ಅಧಿಕಾರ ಸ್ವೀಕರಿಸಿದ ಆರು ತಿಂಗಳಿನೊಳಗೆ ವಿಧಾನಸಭೆ ಸದಸ್ಯತ್ವವನ್ನು ಪಡೆಯದಿದ್ದಲ್ಲಿ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ಇಲ್ಲ.

ತುಳಸಿರಾಮ್‌ ಸಿಲಾವತ್‌ ಅವರು ಜಲಸಂಪನ್ಮೂಲ ಸಚಿವರಾಗಿ ಮತ್ತು ಗೋವಿಂದ್‌ ರಜಪೂತ್ ಅವರು ರಸ್ತೆಸಾರಿಗೆ ಸಚಿವರಾಗಿ ಏ.21 ರಂದು ಅಧಿಕಾರ ಸ್ವೀಕರಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು