ಶುಕ್ರವಾರ, ಮೇ 14, 2021
27 °C

ಮುಂಬೈನ ಎರಡು ಸ್ಥಳಗಳಲ್ಲಿ ದಾಳಿ; 2,200 ರೆಮ್‌ಡಿಸಿವಿರ್ ವಶಕ್ಕೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಾರಾಷ್ಟ್ರದ ಮುಂಬೈನ ಎರಡು ಸ್ಥಳಗಳಲ್ಲಿ ಪೊಲೀಸರು ಮತ್ತು ಎಫ್‌ಡಿಎ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ರಫ್ತುದಾರರು ಸಂಗ್ರಹಿಸಿದ್ದ 2,200 ರೆಮ್‌ಡಿಸಿವಿರ್ ಔಷಧಿ ಸೀಸೆಗಳನ್ನು ವಶಕ್ಕೆ ಪಡೆಯಲಾಗಿದೆ.

‘ದಕ್ಷಿಣ ಮುಂಬೈನ ನ್ಯೂ ಮೆರಿನ್‌ ಲೈನ್ಸ್‌ ಮತ್ತು ಉಪನಗರ ಅಂಧೇರಿಯಲ್ಲಿ ಸೋಮವಾರ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ(ಎಫ್‌ಡಿಎ) ಸೋಮವಾರ ದಾಳಿ ನಡೆಸಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಅಂಧೇರಿಯ (ಪೂರ್ವ) ಮರೋಲ್‌ ಪ್ರದೇಶದಿಂದ ಔಷಧಿ ಕಂಪನಿಯೊಂದಕ್ಕೆ ಸೇರಿದ 2,000 ರೆಮ್‌ಡಿಸಿವಿರ್ ಸೀಸೆ ಮತ್ತು ನ್ಯೂ ಮೆರಿನ್‌ ಲೈನ್ಸ್‌ ಪ್ರದೇಶದಲ್ಲಿ 200 ಸೀಸೆಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಎಫ್‌ಡಿಎ ಆಸ್ಪತ್ರೆಗಳಿಗೆ ನೀಡಲಿದೆ’ ಎಂದು ಮುಂಬೈ ಪೊಲೀಸರ ವಕ್ತಾರ ಎಸ್‌.ಚೈತನ್ಯ ಅವರು ಮಾಹಿತಿ ನೀಡಿದರು.

ರೆಮ್‌ಡಿಸಿವಿರ್ ಅನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ದೇಶದಲ್ಲಿ ಕೋವಿಡ್‌ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ನಿಟ್ಟಿನಲ್ಲಿ ಕಳೆದ ವಾರ ಕೇಂದ್ರ ಸರ್ಕಾರವು ರೆಮ್‌ಡಿಸಿವಿರ್‌ ಔಷಧಿಯ ರಫ್ತಿನ ಮೇಲೆ ನಿರ್ಬಂಧ ವಿಧಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು