ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಚುನಾವಣೆ: ಸಂಸತ್‌ನಲ್ಲಿ ಚಲಾವಣೆಯಾಗಿದ್ದ ಮತಗಳಲ್ಲಿ ಶೇ 28 ಅನರ್ಹ

Last Updated 21 ಜುಲೈ 2022, 19:17 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರಪತಿ ಚುನಾವಣೆ ವೇಳೆ ಸಂಸತ್‌ನಲ್ಲಿ ಚಲಾವಣೆಯಾಗಿದ್ದ ಮತಗಳ ಪೈಕಿ ಶೇ 28ರಷ್ಟು ಮತಗಳು ಅನರ್ಹಗೊಂಡಿವೆ.

ದೇಶದಲ್ಲಿ ಚಲಾವಣೆಯಾಗಿದ್ದ ಒಟ್ಟು ಮತಗಳ ಪೈಕಿ 53 ಮತಗಳು ಅನರ್ಹಗೊಂಡಿವೆ. ಸಂಸತ್‌ನಲ್ಲಿ ಚಲಾವಣೆಯಾಗಿದ್ದ ಮತಗಳ ಪೈಕಿ 15, ಪಂಜಾಬ್‌ ಮತ್ತು ಮಧ್ಯಪ್ರದೇಶದಲ್ಲಿ ತಲಾ 5, ನವದೆಹಲಿ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ತಲಾ 4, ಉತ್ತರ ಪ್ರದೇಶದಲ್ಲಿ 3, ಅಸ್ಸಾಂನಲ್ಲಿ 2, ಉತ್ತರಾಖಂಡ, ತೆಲಂಗಾಣ, ತಮಿಳುನಾಡು, ಮೇಘಾಲಯ, ಜಾರ್ಖಂಡ್‌, ಹಿಮಾಚಲ ಪ್ರದೇಶ ಮತ್ತು ಪುದುಚೇರಿಯಲ್ಲಿ ತಲಾ ಒಂದು ಮತಗಳು ಅನರ್ಹವಾಗಿವೆ.

‘ಸಂಸತ್‌ ಸದಸ್ಯರ ಪೈಕಿ ಹಲವರು ಮತ ಪತ್ರದಲ್ಲಿ ಅಭ್ಯರ್ಥಿಗಳ ಹೆಸರಿನ ಮುಂದೆ ಮುದ್ರೆ ಒತ್ತುವ ಬದಲು ಅಭ್ಯರ್ಥಿಗಳ ಹೆಸರು ಬರೆದಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಆಂಧ್ರಪ್ರದೇಶ, ಅರುಣಾಚಲಪ‍್ರದೇಶ, ಬಿಹಾರ, ಛತ್ತೀಸಗಡ, ಗೋವಾ, ಕೇರಳ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್‌, ಒಡಿಶಾ, ರಾಜಸ್ಥಾನ, ಸಿಕ್ಕಿಂ ಹಾಗೂ ತ್ರಿಪುರ ರಾಜ್ಯಗಳಲ್ಲಿ ಚಲಾವಣೆಯಾದ ಮತಗಳೆಲ್ಲವೂ ಮಾನ್ಯವಾಗಿವೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT