ಗುರುವಾರ , ಸೆಪ್ಟೆಂಬರ್ 16, 2021
29 °C

ಹೆಲಿಕಾಪ್ಟರ್ ಅಪಘಾತ, ನಾಲ್ವರು ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಕೊಲುಸಾ (ಅಮೆರಿಕ): ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭಾನುವಾರ ಹೆಲಿಕಾಪ್ಟರ್‌ವೊಂದು ಅಪಘಾತಕ್ಕೀಡಾಗಿ ನಾಲ್ವರು ಮೃತಪಟ್ಟಿರುವುದಾಗಿ ಕೊಲುಸಾ ಕೌಂಟಿಯ ಷರೀಫ್‌ ಇಲಾಖೆ ತಿಳಿಸಿದೆ.

ಕೆಎಕ್ಸ್‌ ಟಿವಿಗೆ ಈ ಸುದ್ದಿಯನ್ನು ಇಲಾಖೆ ಖಚಿತಪಡಿಸಿದೆ. ಈ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಷರೀಫ್ ಇಲಾಖೆ‌, ಮೃತರ ಗುರುತುಗಳನ್ನು ಇನ್ನೂ ಬಹಿರಂಪಡಿಸಿಲ್ಲ.

ದಿ ರಾಬಿನ್‌ಸನ್ ಆರ್‌66 ಹೆಸರಿನ ಹೆಲಿಕಾಪ್ಟರ್‌ ಭಾನುವಾರ ಮಧ್ಯಾಹ್ನ 1.15 ರ ಸುಮಾರಿಗೆ ಅಪಘಾತಕ್ಕೀಡಾಯಿತು ಎಂದು ಸ್ಯಾಕ್ರಮೆಂಟೊದ ಉತ್ತರದಲ್ಲಿರುವ ಕೊಲುಸಾ ಕೌಂಟಿಯ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು