ದೇಶದಲ್ಲಿ ಈಗ 50 ಲಕ್ಷ ಸೋಂಕಿತರು

ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 50 ಲಕ್ಷ ದಾಟಿದೆ. ಮಂಗಳವಾರ ದೇಶದಾದ್ಯಂತ 90,417 ಪ್ರಕರಣ ವರದಿಯಾಗಿದ್ದು, ಸೋಂಕು ಪೀಡಿತರ ಸಂಖ್ಯೆ 50,05,963 ಮುಟ್ಟಿದೆ. ಈ ಪೈಕಿ ಸಕ್ರಿಯ ಪ್ರಕರಣಗಳು 10 ಲಕ್ಷದ ಸನಿಹದಲ್ಲಿವೆ. ಮೃತರ ಸಂಖ್ಯೆ 81 ಸಾವಿರ ದಾಟಿದೆ.
ಶೇ 60ರಷ್ಟು ಕೊರೊನಾ ಪ್ರಕರಣಗಳು ದೇಶದ ಐದು ರಾಜ್ಯಗಳಿಗೆ ಸೇರಿದ್ದಾಗಿವೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಪ್ರದೇಶ ಹಾಗೂ ತಮಿಳುನಾಡು ಈ ಪಟ್ಟಿಯಲ್ಲಿವೆ. ಈ ಐದೂ ರಾಜ್ಯಗಳಲ್ಲಿ ಶೇ 60ರಷ್ಟು ಗುಣಮುಖ ಪ್ರಮಾಣ ದಾಖಲಾಗಿದೆ.
ಕರ್ನಾಟಕದ ಕೋವಿಡ್ ಪ್ರಕರಣಗಳು ಐದು ಲಕ್ಷ ಸಮೀಪಿಸುತ್ತಿವೆ. 4.5 ಲಕ್ಷ ಪ್ರಕರಣಗಳು ಕಂಡುಬಂದ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೆಯದ್ದು. ರಾಜ್ಯದಲ್ಲಿ ಸತತ 10 ದಿನಗಳ ಕಾಲ ಪ್ರತಿದಿನ 9 ಸಾವಿರ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.
***
*ದೇಶದಲ್ಲಿ 1 ಲಕ್ಷ ಪ್ರಕರಣಗಳು ದಾಖಲಾಗಲು 110 ದಿನ ಹಿಡಿದಿದ್ದವು. 10 ಲಕ್ಷದಿಂದ 20 ಲಕ್ಷ ಆಗಲು 21 ದಿನ ಹಿಡಿಯಿತು. ಆದರೆ ಕೇವಲ 61 ದಿನಗಳಲ್ಲಿ ಉಳಿದ 30 ಲಕ್ಷ ಪ್ರಕರಣ ದಾಖಲಾಗಿವೆ
*ಮಹಾನಗರಗಳ ಪೈಕಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಳವಾಗಿದ್ದು, ದೇಶದಲ್ಲಿ ಎರಡನೇ ಸ್ಥಾನಕ್ಕೆ ಹೋಗಿದೆ. ಮುಂಬೈಯನ್ನು ಬೆಂಗಳೂರು ಹಿಂದಿಕ್ಕಿದೆ. ಮೊದಲ ಸ್ಥಾನದಲ್ಲಿ ದೆಹಲಿ ಇದೆ
*ಒಟ್ಟು ಪ್ರಕರಣಗಳ ಜಾಗತಿಕ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ಹಾಗೂ ಮೂರನೇ ಸ್ಥಾನದಲ್ಲಿ ಬ್ರೆಜಿಲ್ ಇವೆ
*ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಭಾರತದಲ್ಲೇ ಹೆಚ್ಚು. ಬ್ರೆಜಿಲ್ ಹಾಗೂ ಅಮೆರಿಕ ದೇಶಗಳು ನಂತರದ ಸ್ಥಾನದಲ್ಲಿವೆ
ಅಂಕಿ–ಅಂಶ
5.83 ಕೋಟಿ: ಈವರೆಗೆ ನಡೆಸಲಾದ ತಪಾಸಣೆಗಳ ಸಂಖ್ಯೆ
10.72 ಲಕ್ಷ: ಸೋಮವಾರ ನಡೆಸಲಾದ ತಪಾಸಣೆಗಳ ಸಂಖ್ಯೆ
1.64%: ಕೋವಿಡ್‌ನಿಂದ ಮರಣ ಪ್ರಮಾಣ
78.28%: ಕೋವಿಡ್‌ನಿಂದ ಗುಣಮಖ ಪ್ರಮಾಣ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.