ಮಾದಕವಸ್ತು: ಪಾಕಿಸ್ತಾನದ 6 ಪ್ರಜೆಗಳ ವಿರುದ್ಧ ಎನ್‌ಐಎ ಆರೋಪಪಟ್ಟಿ

ನವದೆಹಲಿ: ಗುಜರಾತ್‌ನಲ್ಲಿ 2019ರ ಮೇ ತಿಂಗಳಲ್ಲಿ 237 ಕೆ.ಜಿ ಮಾದಕವಸ್ತು ವಶಕ್ಕೆ ಪಡೆದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್‌ಐಎ) ಏಳು ಜನರ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದು, ಈ ಪೈಕಿ ಆರು ಜನರು ಪಾಕಿಸ್ತಾನದ ಪ್ರಜೆಗಳಾಗಿದ್ದಾರೆ.
ಅಹಮದಾಬಾದ್‌ನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಆರೋಪಪಟ್ಟಿ ಸಲ್ಲಿಸಲಾಗಿದೆ. ಭಾರತೀಯ ದಂಡ ಸಂಹಿತೆ ಹಾಗೂ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ ಹಾಗೂ ಎನ್‌ಡಿಪಿಎಸ್ ಕಾಯ್ದೆಯಡಿ ಪಾಕಿಸ್ತಾನದ ಕರಾಚಿಯ ನಿವಾಸಿಗಳಾದ ಸಫ್ದಾರ್ ಅಲಿ, ಅಲಾಹಿ ದಾದ್ ಅಂಗಿಯಾರ, ಅಜೀಮ್ ಖಾನ್, ಅಬ್ದುಲ್ ಅಜೀಜ್, ಅಬ್ದುಲ್ ಗಫೂರ್, ಮೊಹಮ್ಮದ್ ಮಲಾಹ್ ಹಾಗೂ ಗುಜರಾತ್‌ನ ದ್ವಾರಕ ನಿವಾಸಿ ರಮ್ಜಾನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎನ್‌ಐಎ ವಕ್ತಾರರೊಬ್ಬರು ತಿಳಿಸಿದರು.
ಬಂಧಿತ ಆರೋಪಿಗಳು ಗುಜರಾತ್ ಒಳಗೆ 330 ಕೆ.ಜಿ ಮಾದಕವಸ್ತುಗಳನ್ನು ತರಲು ಸಂಚು ರೂಪಿಸಿದ್ದರು. ಆದರೆ, ಭಾರತೀಯ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಇವರನ್ನು ಬಂಧಿಸಿ, 237 ಕೆ.ಜಿ ಮಾದಕವಸ್ತು, ಪಾಕಿಸ್ತಾನದ ನಗದು ವಶಕ್ಕೆ ಪಡೆದಿದ್ದರು. ತಲೆಮರೆಸಿಕೊಂಡಿರುವ ಇನ್ನೂ 9 ಪಾಕಿಸ್ತಾನದ ಪ್ರಜೆಗಳ ವಿರುದ್ಧ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.