ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳೊಳಗೆ ಶೇ 85ರಷ್ಟು ಪ್ರಯಾಣಿಕ ರೈಲುಗಳ ಕಾರ್ಯಾಚರಣೆ ಆರಂಭ

ರೈಲ್ವೆ ಸಚಿವ ಪೀಯೂಷ್‌ ಗೋಯಲ್ ಹೇಳಿಕೆ
Last Updated 11 ಮಾರ್ಚ್ 2021, 13:07 IST
ಅಕ್ಷರ ಗಾತ್ರ

ನವದೆಹಲಿ: ಶೇ 85ರಷ್ಟು ಪ್ರಯಾಣಿಕ ರೈಲುಗಳ ಕಾರ್ಯಾಚರಣೆಯನ್ನು ತಿಂಗಳೊಳಗೆ ಆರಂಭಿಸಲಾಗುವುದು ಎಂದು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಗುರುವಾರ ಹೇಳಿದರು.

‘ಆರಂಭದಲ್ಲಿ ಕೆಲವೇ ರೈಲುಗಳ ಸಂಚಾರ ಆರಂಭಿಸಲಾಗುವುದು. ಬೇಡಿಕೆ ಹಾಗೂ ಪ್ರಯಾಣಿಕ ದಟ್ಟಣೆಯನ್ನು ಗಮನಿಸಿ ಕ್ರಮೇಣ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು’ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಸದ್ಯ, ಉಪನಗರ ರೈಲುಗಳ ಪೈಕಿ ಶೇ 95ರಷ್ಟು ರೈಲುಗಳು ಸಂಚಾರ ಆರಂಭಗೊಂಡಿದೆ. ಶೇ 75ರಷ್ಟು ಮೇಲ್‌ ಹಾಗೂ ಎಕ್ಸ್‌ಪ್ರೆಸ್‌ ರೈಲುಗಳು ಕಾರ್ಯಾಚರಣೆ ಆರಂಭಿಸಿವೆ. ಈ ಪ್ರಮಾಣವನ್ನು ಶೀಘ್ರವೇ ಶೆ 85ರಷ್ಟು ಹೆಚ್ಚಿಸಲಾಗುವುದು’ ಎಂದೂ ಹೇಳಿದರು.

‘ಸಾಮಾನ್ಯ ದಿನಗಳಲ್ಲಿ ಸಾಗಿಸುತ್ತಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಸರಕನ್ನು ಈಗ ಸಾಗಿಸಲಾಗುತ್ತಿದೆ. ಕಳೆದ ವರ್ಷ ಕೋವಿಡ್‌ ವ್ಯಾಪಿಸಿದ ಅವಧಿಗೆ ಹೋಲಿಸಿದಾಗ ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ಒಳಗಾಗಿ 10 ದಶಲಕ್ಷ ಟನ್‌ನಷ್ಟು ಅಧಿಕ ಸರಕು ಸಾಗಿಸುವ ನಿರೀಕ್ಷೆ ಇದೆ’ ಎಂದರು.

‘ಕಳೆದ ವರ್ಷದ ಮಾರ್ಚ್‌ 9ರ ವರೆಗಿನ ಅವಧಿಗೆ ಹೋಲಿಸಿದರೆ, ಈ ಮಾರ್ಚ್‌ನ ಇದೇ ಅವಧಿಯಲ್ಲಿ ಶೇ 6.75ರಷ್ಟು ಅಧಿಕ ಸರಕು ಸಾಗಣೆ ಮಾಡಲಾಗಿದೆ’ ಎಂದೂ ಗೋಯಲ್‌ ಹೇಳಿದರು.

‘ನ್ಯಾಷನಲ್‌ ರೇಲ್‌ ಪ್ಲಾನ್‌’ ಸಿದ್ಧ
’2030ರ ವೇಳೆಗೆ ದೇಶಕ್ಕೆ ಅಗತ್ಯವಿರುವ ರೈಲುಗಳ ಸೇವೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ‘ನ್ಯಾಷನಲ್‌ ರೇಲ್‌ ಪ್ಲಾನ್‌’ (ಎನ್‌ಆರ್‌ಪಿ) ಅನ್ನು ಭಾರತೀಯ ರೈಲ್ವೆ ಸಿದ್ಧಪಡಿಸಿದೆ’ ಎಂದು ಸಚಿವ ಪೀಯೂಷ್‌ ಗೋಯಲ್‌ ಲೋಕಸಭೆಯಲ್ಲಿ ಹೇಳಿದರು.

‘ಸರಕು ಸಾಗಣೆ, ಪ್ರಯಾಣಿಕ ರೈಲುಗಳ ಕಾರ್ಯಾಚರಣೆ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶ ಹೊಂದಲಾಗಿದೆ. ಅದರಲ್ಲೂ, 2050ರ ವೇಳೆಗೆ ದೇಶದಲ್ಲಿನ ಸರಕು ಸಾಗಣೆ ಕ್ಷೇತ್ರದಲ್ಲಿ ರೈಲ್ವೆ ಪಾಲು ಶೇ 45ರಷ್ಟಕ್ಕೆ ಹೆಚ್ಚಿಸಲು ಬೇಕಾದ ಕ್ರಮಗಳನ್ನು ಈ ಎನ್‌ಆರ್‌ಪಿ ಒಳಗೊಂಡಿದೆ’ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT