ಗುರುವಾರ , ಮೇ 26, 2022
28 °C

ಉತ್ತರಪ್ರದೇಶ: ಖಾಲಿಸ್ತಾನ್ ಪರ ಭಯೋತ್ಪಾದಕರ ಸಹಚರನ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ‘ಖಾಲಿಸ್ತಾನ್ ಪರ ಭಯೋತ್ಪಾದಕರ ಸಹಚರನೊಬ್ಬನನ್ನು ಪಂಜಾಬ್‌ ಮತ್ತು ಉತ್ತರ ಪ್ರದೇಶ ಪೊಲೀಸರ ತಂಡವು ಬಂಧಿಸಿದೆ’ ಎಂದು ಪೊಲೀಸರು ತಿಳಿಸಿದರು.

‘ಲಖನೌನ ವಿಕಾಸ್‌ ನಗರ ಪ್ರದೇಶದಲ್ಲಿ ಜಗ್ದೇವ್‌ ಸಿಂಗ್‌ ಅಲಿಯಾಸ್‌ ಜಗ್ಗನನ್ನು ಸೋಮವಾರ ಬಂಧಿಸಲಾಗಿದೆ. ಖಾಲಿಸ್ತಾನ್ ಪರ ಭಯೋತ್ಪಾದಕರಾದ ಪರಂಜೀತ್‌ ಸಿಂಗ್ ಪಮ್ಮಾ ಮತ್ತು ಮಾಲ್ತಾನಿ ಸಿಂಗ್ ಅವರೊಂದಿಗೆ ಸಂಬಂಧವನ್ನು ಹೊಂದಿದ್ದಾನೆ ಎಂಬ ಆರೋಪದಡಿ ಈತನನ್ನು ಬಂಧಿಸಲಾಗಿದೆ’ ಎಂದು ಅವರು ಹೇಳಿದರು.

‘ಸದ್ಯ ಪರಂಜೀತ್‌ ಸಿಂಗ್‌ ಬ್ರಿಟನ್‌ನಲ್ಲಿದ್ದಾನೆ. ಮುಲ್ತಾನಿ ಸಿಂಗ್‌ ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದಾನೆ. ಇವರಿಬ್ಬರೂ ದೇಶ ವಿರೋಧಿ ಕೆಲಸದಲ್ಲಿ ಭಾಗಿಯಾಗಿದ್ದು, ಪಂಜಾಬ್‌ನಲ್ಲಿ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಧಾರ್ಮಿಕ ಸಹಿಷ್ಣುತೆಯನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಪಂಜಾಬ್‌ನಲ್ಲಿ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಜಗ್ದೇವ್‌ ಸಿಂಗ್‌ಗೆ ಪರಂಜೀತ್‌ ಮತ್ತು ಮುಲ್ತಾನಿ ಸಿಂಗ್‌ ಹಣ ನೀಡಿದ್ದರು. ಇದರಿಂದ ಜಗ್ದೇವ್‌ ಮತ್ತು ಆತನ ಸ್ನೇಹಿತ ಜಗ್‌ರೂಪ್‌ ಮಧ್ಯಪ್ರದೇಶದಿಂದ ಗನ್‌ ಮತ್ತು ಸಿಡಿಮದ್ದನ್ನು ಖರೀದಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಪಂಜಾಬ್‌ ಪೊಲೀಸರು ಭಾನುವಾರ ಜಗ್‌ರೂಪ್‌ನನ್ನು ಬಂಧಿಸಿದ್ದರು’ ಎಂದು ಅವರು ಹೇಳಿದರು.

ಇದನ್ನೂ ಓದಿ... ದೆಹಲಿ ಹಿಂಸಾಚಾರ ಪ್ರಕರಣ: ಪ್ರಮುಖ ಆರೋಪಿ ದೀಪ್‌ ಸಿಧು ಬಂಧನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು