ಭಾನುವಾರ, ಅಕ್ಟೋಬರ್ 24, 2021
25 °C

ಮತಕ್ಕಾಗಿ ರಾಜ ಮಿಹಿರ್‌ ಭೋಜ್‌ ಜಾತಿ ಬದಲಿಸಿದ ಯೋಗಿ: ಅಖಿಲೇಶ್ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮತಕ್ಕಾಗಿ 9ನೇ ಶತಮಾನದ ರಾಜ ಮಿಹಿರ್‌ ಭೋಜ್‌ರ ಜಾತಿಯನ್ನೇ ‘ಬದಲಿಸಿದರು’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ ಟೀಕಿಸಿದ್ದಾರೆ.

ಯೋಗಿ ಆದಿತ್ಯನಾಥ ಅವರು ದಾದ್ರಿಯ ಗೌತಮಬುದ್ಧ ನಗರದಲ್ಲಿ ಮಿಹಿರ್ ಭೋಜ್‌ ಅವರ 15 ಅಡಿ ಎತ್ತರದ ಪ್ರತಿಮೆ ಅನಾವರಣಗೊಳಿಸಿದ ಹಿಂದೆಯೇ ಈ ಟೀಕೆ ವ್ಯಕ್ತವಾಗಿದೆ. ಗುರ್ಜಾರ್‌ ಮತ್ತು ರಜಪೂತ್ ಸಮುದಾಯದವರು ಮಿಹಿರ್‌ ಭೋಜ್‌ ತಮ್ಮ ಸಮುದಾಯಕ್ಕೆ ಸೇರಬೇಕಾದವರು ಎಂದು ಪ್ರತಿಪಾದಿಸುತ್ತಿವೆ.

ಚರಿತ್ರೆಯಲ್ಲಿ ಮಿಹಿರ್‌ ಭೋಜ್‌ ಅವರು ಗುರ್ಜಾರ್‌ ಪ್ರತಿಹಾರ್ ಎಂದು ತಿಳಿಸಲಾಗಿದೆ. ಆದರೆ, ಬಿಜೆಪಿಯವರು ಆವರ ಜಾತಿಯನ್ನೇ ಬದಲಿಸಿದ್ದಾರೆ, ಇದು ಖಂಡನೀಯ ಎಂದು ಅಖಿಲೇಶ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು