ಭಾನುವಾರ, ಮಾರ್ಚ್ 7, 2021
32 °C

ಅಸ್ಸಾಂ: 1.6 ಲಕ್ಷ ಕುಟುಂಬಗಳಿಗೆ ಭೂ ದಾಖಲೆ ಹಸ್ತಾಂತರಿಸಿದ ಪ್ರಧಾನಿ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Narendra Modi

ದಿಸ್‌ಪುರ: ದೇಶದ ಜನರ ಅಸ್ತಿತ್ವ ಮತ್ತು ಸಂಸ್ಕೃತಿಯನ್ನು ಕಾ‍ಪಾಡಲು ಬದ್ಧರಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಸ್ಸಾಂನ 1.6 ಲಕ್ಷ ಕುಟುಂಬಗಳಿಗೆ ಭೂ ದಾಖಲೆ ಹಸ್ತಾಂತರಿಸಿದ ಬಳಿಕ ಶಿವಸಾಗರ್ ಜಿಲ್ಲೆಯ ಜೆರೆಂಗಾ ಪತಾರ್‌ ಮೈದಾನದಲ್ಲಿ ರ್‍ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.

ಅಸ್ಸಾಂ ವಿಧಾನಸಭೆಗೆ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ.

‘ದೇಶದ ಜನರ ಅಸ್ತಿತ್ವ ಮತ್ತು ಸಂಸ್ಕೃತಿಯನ್ನು ಕಾಪಾಡಲು ಕೇಂದ್ರದ ಬಿಜೆಪಿ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಂಡಿದೆ’ ಎಂದು ಮೋದಿ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ (ಸಿಎಎ) ಆಕ್ರೋಶಗೊಂಡಿರುವ ಶಿವಸಾಗರ್ ಜಿಲ್ಲೆಯ ಜನರ ಓಲೈಕೆಗೆ ಬಿಜೆಪಿ ಮುಂದಾಗಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮೋದಿ ಅವರ ರ್‍ಯಾಲಿಯೂ ಇದರಲ್ಲಿ ಒಂದಾಗಿದೆ. ಸಿಎಎ ವಿರುದ್ಧ ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಲ್ಲಿ ಭಾರಿ ‍ಪ್ರತಿಭಟನೆ ನಡೆದಿತ್ತು.

‘ಭೂ ದಾಖಲೆಗಳು ಇಲ್ಲಿನ ಸಹೋದರ ಸಹೋದರಿಯರ ದೊಡ್ಡ ಸಮಸ್ಯೆಯನ್ನು ನಿವಾರಿಸಲಿದೆ. ಭೂ ದಾಖಲೆಗಳು ಈಗ ಕೈಯಲ್ಲಿರುವ ಕಾರಣ ರೈತರಿನ್ನು ಸರ್ಕಾರದ ಎಲ್ಲ ಯೋಜನೆಗಳ ಪ್ರಯೋಜನ ಪಡೆಯಬಹುದು. ಬ್ಯಾಂಕ್‌ನಿಂದ ಸಾಲವನ್ನೂ ಪಡೆಯಬಹುದು. 2016ರ ವರೆಗೆ 6 ಲಕ್ಷ ಕುಟುಂಬಗಳಿಗೆ ಭೂ ದಾಖಲೆಗಳಿರಲಿಲ್ಲ’ ಎಂದು ಮೋದಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು