ಭಾನುವಾರ, ಸೆಪ್ಟೆಂಬರ್ 26, 2021
22 °C

ವಿಮಾನದಲ್ಲಿ ಬಾವಲಿ ಕಳೇಬರ: ಟೇಕಾಫ್‌ ಆದ ಅರ್ಧಗಂಟೆಯಲ್ಲೇ ವಾಪಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ದೆಹಲಿ: ದೆಹಲಿಯಿಂದ ಅಮೆರಿಕದ ನೆವಾರ್ಕ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಮೇ 27ರ ಗುರುವಾರ ಬಾವಲಿಯ ಕಳೇಬರ ಪತ್ತೆಯಾಗಿದ್ದು, ವಿಮಾನವು ಟೇಕಾಫ್‌ ಆದ ಅರ್ಧ ಗಂಟೆಯಲ್ಲೆ ದೆಹಲಿಗೆ ಮರಳಿದೆ. ಈ ಕುರಿತು ಮೂಲಗಳು ಮಾಹಿತಿ ಒದಗಿಸಿವೆ.

ಗುರುವಾರ ಮುಂಜಾನೆ 2.20 ಕ್ಕೆ ವಿಮಾನ ದೆಹಲಿಯಿಂದ ಹೊರಟಿತ್ತು. ಟೇಕ್ ಆಫ್ ಆಗುವ ಮುನ್ನ ಬಾವಲಿಯ ಕಳೇಬರವನ್ನು ಯಾರೂ ಗಮನಿಸಿರಲಿಲ್ಲ. ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನ, 8ನೇ ಆಸನದ ಬಳಿ ಬಾವಲಿಯ ಕಳೇಬರ ಪತ್ತೆಯಾಗಿದೆ. ಈ ಬಗ್ಗೆ ಕೂಡಲೇ ಪೈಲಟ್‌ಗಳಿಗೆ ಮಾಹಿತಿ ನೀಡಲಾಗಿದೆ.

ಈ ಬಗ್ಗೆ ಪೈಲಟ್‌ ಏರ್ ಟ್ರಾಫಿಕ್‌ ಕಂಟ್ರೋಲರ್‌ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ವಿಮಾನವನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾತ್ರಿ 2.20ರಲ್ಲಿ ಟೇಕಾಫ್‌ ಆಗಿದ್ದ ವಿಮಾನವನ್ನು ಅರ್ಧ ಗಂಟೆಯಲ್ಲೇ ಹಿಂದಕ್ಕೆ ಕರೆಯಲಾಯಿತು. ಆದರೆ, 4.30ರ ವರೆಗೆ ಹಾರಾಟ ನಡೆಸಿ ಇಂಧನವನ್ನು ಖಾಲಿ ಮಾಡಿ ನಂತರ ವಿಮಾನವನ್ನು ಲ್ಯಾಂಡ್‌ ಮಾಡಲಾಗಿದೆ.

ಬೋಯಿಂಗ್ ಬಿ 777-300ಇಆರ್‌ ವಿಮಾನವನ್ನು ನಂತರ ಸ್ವಚ್ಛಗೊಳಿಸಲಾಗಿದೆ. ಆದರೆ, ಏರ್‌ ಇಂಡಿಯಾ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ವಿಮಾನಯಾನ ಸಂಸ್ಥೆಯು ತನ್ನ ಎಂಜಿನಿಯರಿಂಗ್ ವಿಭಾಗದಿಂದ ವಿವರವಾದ ವರದಿಯನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು