ಬುಧವಾರ, ಮಾರ್ಚ್ 29, 2023
23 °C

ಮುಸ್ಲಿಂ ಮಹಿಳೆಯ ಮಸೀದಿ ಪ್ರವೇಶದ ಮೇಲೆ ನಿಷೇಧ ಇಲ್ಲ: ಎಐಎಂಪಿಎಲ್‌ಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಸ್ಲಿಂ ಮಹಿಳೆಯರು ಮಸೀದಿಯನ್ನು ಪ್ರವೇಶಿಸುವುದು ಹಾಗೂ ನಮಾಜ್‌ ಸಲ್ಲಿಸುವುದರ ಮೇಲೆ ನಿಷೇಧ ಇಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಹೇಳಿದೆ.

ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಮತ್ತೊಂದು ಪ್ರಮಾಣಪತ್ರದಲ್ಲಿ ಈ ಕುರಿತು ವಿವರಣೆ ನೀಡಲಾಗಿದೆ ಎಂದು ಮಂಡಳಿಯು ಬುಧವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಇಸ್ಲಾಂ ಧರ್ಮಗ್ರಂಥದಲ್ಲಿ ಇದೇ ಮಾತನ್ನು ಹೇಳಲಾಗಿದ್ದು, ತನ್ನ ಅಭಿಪ್ರಾಯವೂ ಇದೇ ಆಗಿದೆ ಎಂದು ಮಂಡಳಿ ಹೇಳಿದೆ.

ಮುಸ್ಲಿಂ ಮಹಿಳೆಯರಿಗೆ ಮಸೀದಿಗಳಿಗೆ ಪ್ರವೇಶ ನೀಡಬೇಕು ಹಾಗೂ ನಮಾಜ್‌ ಸಲ್ಲಿಸಲು ಅವಕಾಶ ಒದಗಿಸುವಂತೆ ನಿರ್ದೇಶನ ನೀಡಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿ ಮಂಡಳಿ ಈ ಪ್ರಮಾಣಪತ್ರ ಸಲ್ಲಿಸಿದೆ.

‘ಒಂದೇ ಸಾಲಿನಲ್ಲಿ ಅಥವಾ ಸಾಮಾನ್ಯ ಸ್ಥಳದಲ್ಲಿ ವಿಭಿನ್ನ ಲಿಂಗಿಗಳು ಸೇರುವುದಕ್ಕೂ ಇಸ್ಲಾಂನಲ್ಲಿ ಅನುಮತಿ ಇಲ್ಲ. ಹೀಗಾಗಿ, ಮಹಿಳೆಯರು ಹಾಗೂ ಇತರರನ್ನು ಬೇರ್ಪಡಿಸಲು ಅಗತ್ಯ ಸ್ಥಳಾವಕಾಶ ಅಗತ್ಯವೆನಿಸಿದಲ್ಲಿ, ಸಂಬಂಧಪಟ್ಟ ವ್ಯವಸ್ಥಾಪನಾ ಸಮಿತಿಯು ವ್ಯವಸ್ಥೆ ಮಾಡಬೇಕು’ ಎಂದೂ ಮಂಡಳಿಯು ತಿಳಿಸಿದೆ.

‘ಭಾರತದ ಮಸೀದಿಗಳಲ್ಲಿ ಲಭ್ಯವಿರುವ ಸೌಲಭ್ಯಗಳಿಗೆ ಅನುಸಾರವಾಗಿ, ಮಹಿಳೆಯರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲು ಆಯಾ ವ್ಯವಸ್ಥಾಪಕ ಮಂಡಳಿಗಳು ಸ್ವತಂತ್ರವಾಗಿವೆ’ ಎಂದು ತಿಳಿಸಿದೆ.

ಅಲ್ಲದೇ, ಎಲ್ಲಿಯಾದರೂ ಹೊಸ ಮಸೀದಿಯನ್ನು ನಿರ್ಮಿಸಿದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸುವ ಬಗ್ಗೆ ಗಮನ ಹರಿಸುವುದು ಮುಖ್ಯ ಎಂದೂ ಮಂಡಳಿ ತನ್ನ ಪ್ರಮಾಣಪತ್ರದಲ್ಲಿ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು