ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ 24 ಕ್ಯಾರೆಟ್ ದೇಶದ್ರೋಹಿ: ಜೈರಾಮ್ ರಮೇಶ್

Last Updated 3 ಡಿಸೆಂಬರ್ 2022, 9:59 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು24 ಕ್ಯಾರೆಟ್ ದೇಶದ್ರೋಹಿ ಎಂದುಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕರೆದಿದ್ದಾರೆ.

ಮಧ್ಯಪ್ರದೇಶದಲ್ಲಿರುವ ಭಾರತ್‌ ಜೋಡೊ ಯಾತ್ರೆಯಲ್ಲಿ ಅವರು ಭಾಗವಹಿಸಿ ಮಾಧ್ಯಮಗಳ ಜತೆ ಮಾಡಿನಾಡಿದರು.

ಪಕ್ಷ ತೊರೆದ ನಂತರ ಗೌರವ ರೀತಿಯಲ್ಲಿ ಮೌನವಹಿಸಿರುವ ಕಪಿಲ್ ಸಿಬಲ್ ಅವರಂತ ನಾಯಕರಿಗೆ ಮರಳಿ ಪಕ್ಷಕ್ಕೆ ಬರಲು ಅವಕಾಶ ನೀಡಬಹುದು. ಆದರೆ,ಜ್ಯೋತಿರಾದಿತ್ಯ ಸಿಂಧಿಯಾ,ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಂಥ ದ್ರೋಹಿಗಳಿಗೆ ಅವಕಾಶ ಇಲ್ಲ ಎಂದು ಜೈರಾಮ್‌ ರಮೇಶ್ ಹೇಳಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಸ್ಥಾನಮಾನ ಪಡೆದ ಬಳಿಕ ಪಕ್ಷ ತೊರೆದುದುರುಪಯೋಗಪಡಿಸಿಕೊಂಡವರನ್ನು ಮರಳಿ ಪಕ್ಷಕ್ಕೆ ಸ್ವಾಗತಿಸಬಾರದು ಎಂದರು. ಆದರೆ ಘನತೆಯಿಂದ ಪಕ್ಷ ತೊರೆದು ಮೌನವಾಗಿರುವವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಬೇಕು ಎಂಬುದು ನನ್ನ ನಿಲುವು ಎಂದು ಜೈರಾಮ್‌ ರಮೇಶ್ ಹೇಳಿದರು.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 2015ರಲ್ಲಿ ಪಕ್ಷದ ಸೋಲಿಗೆ ರಾಹುಲ್ ಗಾಂಧಿ ಅವರೇ ಕಾರಣ ಎಂದು ಆರೋಪ ಮಾಡಿ ಪಕ್ಷ ತೊರೆದಿದ್ದರು. ಇದಕ್ಕೂ ಮುಂಚೆ ಅವರು ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದರು. 2020ರಲ್ಲಿಸಿಂಧಿಯಾ ಕಾಂಗ್ರೆಸ್ ಪಕ್ಷ ತೊರೆದಿದ್ದರು. ಇವರ ನಡೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನಕ್ಕೆ ಕಾರಣವಾಯಿತು. ನಂತರ ಅವರು ಬಿಜೆಪಿ ಸೇರಿದರು. ಸದ್ಯ ಅವರು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT