ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಣಸಿಯಲ್ಲಿ ಮತಯಂತ್ರಗಳ ಕಳ್ಳತನ: ಅಖಿಲೇಶ್‌ ಯಾದವ್‌ ಗಂಭೀರ ಆರೋಪ

Last Updated 8 ಮಾರ್ಚ್ 2022, 15:40 IST
ಅಕ್ಷರ ಗಾತ್ರ

ಲಖನೌ: ವಾರಾಣಸಿಯಲ್ಲಿ ಮತಯಂತ್ರಗಳನ್ನು ಕದಿಯಲಾಗುತ್ತಿದೆ. ಟ್ರಕ್‌ಗಳಲ್ಲಿ ಇವಿಎಂಗಳನ್ನು ಸಾಗಿಸಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಆರೋಪಿಸಿದ್ದಾರೆ.

ಬಿಜೆಪಿ ಮತಗಳನ್ನು ಕದಿಯಲು ಪ್ರಯತ್ನಿಸುತ್ತಿದೆ ಎಂದು ಅಖಿಲೇಶ್ ಆರೋಪಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬ ವಾತವರಣ ಸೃಷ್ಟಿಸಲು ಮತಗಟ್ಟೆ ಸಮೀಕ್ಷೆಗಳು ನಡೆದಿವೆ ಎಂದು ಎಂದ ಅವರು, ಸಮೀಕ್ಷೆ ಫಲಿತಾಂಶಗಳನ್ನು ತಳ್ಳಿಹಾಕಿದರು.

‌‌ಬಿಜೆಪಿ ಈ ಚುನಾವಣೆಯಲ್ಲಿ ಸೋಲಲಿದೆ. ಹೀಗಾಗಿ ಮತಗಳ ಎಣಿಕೆಯನ್ನು ನಿಧಾನಗೊಳಿಸುವಂತೆ ಸರ್ಕಾರದ ಅಧಿಕಾರಿಗಳು ಅಧೀನ ಅಧಿಕಾರಿಗಳಿಗೆ ನಿರ್ದೇಶಿಸುತ್ತಿದ್ದಾರೆ ಎಂದು ಅಖಿಲೇಶ್ ಆರೋಪಿಸಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

‘ವಾರಾಣಸಿಯ ಜಿಲ್ಲಾಧಿಕಾರಿಯು ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಇವಿಎಂಗಳನ್ನು ಸಾಗಿಸುತ್ತಿದ್ದಾರೆ. ಹೀಗೆ ಇವಿಎಂಗಳನ್ನು ಸಾಗಿಸಿದರೆ ಅಭ್ಯರ್ಥಿಗಳಿಗೆ ತಿಳಿಸಬೇಕು. ಚುನಾವಣಾ ಆಯೋಗ ಈ ಬಗ್ಗೆ ಗಮನಿಸಬೇಕು. ನಾವು ನಮ್ಮ ಮತಗಳನ್ನು ರಕ್ಷಿಸಬೇಕು. ನಾವು ಇದರ ವಿರುದ್ಧವಾಗಿ ನ್ಯಾಯಾಲಯಕ್ಕೆ ಹೋಗಬಹುದು. ಆದರೆ, ಅದಕ್ಕೂ ಮೊದಲು ನಮ್ಮ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಬೇಕು ಎಂದು ನಾನು ಜನರಿಗೆ ಮನವಿ ಮಾಡುತ್ತೇನೆ. ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷ ಗೆಲ್ಲುತ್ತಿದೆ. ಅದನ್ನು ತಡೆಯಲೆಂದೇ ಚುನಾವಣಾ ಆಯೋಗದ ಅಧಿಕಾರಿಗಳು. ಇವಿಎಂ ಅಕ್ರಮದಲ್ಲಿ ತೊಡಗಿದ್ದಾರೆ’ ಎಂದು ಅಖಿಲೇಶ್‌ ಹೇಳಿರುವುದಾಗಿ ಸುದ್ದಿ ಸಂಸ್ಥೆ ‘ಎಎನ್‌ಐ’ ವರದಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT