ಮಂಗಳವಾರ, ಮೇ 24, 2022
31 °C

ಆಂಧ್ರ ಪ್ರದೇಶ: ಜಗನ್‌ ಸರ್ಕಾರದ 24 ಸಚಿವರ ರಾಜೀನಾಮೆ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಆಂಧ್ರಪ್ರದೇಶ ಸಚಿವ ಸಂಪುಟದ ಎಲ್ಲಾ 24 ಸಚಿವರು ಗುರುವಾರ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಈ ಕ್ರಮ ಅನುಸರಿಸಲಾಗಿದೆ.

ಸಚಿವರು ತಮ್ಮ ರಾಜೀನಾಮೆ ಪತ್ರಗಳನ್ನು ಕ್ಯಾಬಿನೆಟ್ ಸಭೆಯಲ್ಲೇ ನೀಡಿದ್ದಾರೆ. ಸದ್ಯ ರಾಜೀನಾಮೆ ನೀಡಿರುವ ಸಚಿವರು 34 ತಿಂಗಳಿಂದ ಅಧಿಕಾರದಲ್ಲಿದ್ದರು.

ಏಪ್ರಿಲ್ 11 ರಂದು ಮಂತ್ರಿಮಂಡಲ ಪುನರ್‌ರಚನೆಯಾಗಲಿದೆ.

ಮುಖ್ಯಮಂತ್ರಿ ಜಗನ್‌ ಬುಧವಾರ ರಾತ್ರಿ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಅವರೊಂದಿಗೆ ಸಭೆ ನಡೆಸಿದ್ದು, ಸಂಪುಟ ಪುನಾರಚನೆ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು