ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ಕೋರ್ಟ್‌: ಮಹಿಳಾ ನ್ಯಾಯಮೂರ್ತಿಗಳೇ ಇರುವ ಪೀಠ ರಚನೆ

Last Updated 1 ಡಿಸೆಂಬರ್ 2022, 20:03 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್‌ನ ಇತಿಹಾಸದಲ್ಲೇ ಇದು ಮೂರನೇ ಬಾರಿಗೆ ಎಲ್ಲಾ ಮಹಿಳಾ ನ್ಯಾಯಮೂರ್ತಿಗಳೇ ಇರುವ ಪೀಠವೊಂದನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರು ಗುರುವಾರ ರಚಿಸಿದ್ದಾರೆ.

ಈ ಪೀಠದಲ್ಲಿ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ಬೇಲಾ ಎಂ. ತ್ರಿವೇದಿ ಇರಲಿದ್ದಾರೆ. ವೈವಾಹಿಕ ಪ್ರಕರಣ ಹಾಗೂ ಜಾಮೀನು ಪ್ರಕರಣಗಳು ಸೇರಿದಂತೆ ವರ್ಗಾವಣೆಗೊಂಡ ಅರ್ಜಿಗಳ ಕುರಿತು ಈ ಪೀಠ ವಿಚಾರಣೆ ನಡೆಸಲಿದೆ. 10 ವರ್ಗಾವಣೆಗೊಂಡ ಅರ್ಜಿಗಳು, 10 ಜಾಮೀನು ಅರ್ಜಿಗಳು ಸೇರಿದಂತೆ ಒಟ್ಟು 32 ಪ್ರಕರಣಗಳುಈ ಪೀಠದ ಮುಂದಿವೆ.

2013ರಲ್ಲಿ ಮೊದಲ ಬಾರಿಗೆ ಎಲ್ಲಾ ಮಹಿಳಾ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವನ್ನು ರಚಿಸಲಾಗಿತ್ತು. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜ್ಞಾನ್‌ ಸುಧಾ ಮಿಶ್ರಾ ಹಾಗೂ ರಂಜನಾ ಪ್ರಕಾಶ್‌ ದೇಸಾಯಿ ಇದ್ದರು. ಎರಡನೇ ಬಾರಿಗೆ 2018ರಲ್ಲಿ ರಚಿಸಲಾಯಿತು. ಇದರಲ್ಲಿ ನ್ಯಾಯಮೂರ್ತಿಗಳಾದ ಆರ್‌. ಬಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದರು.

ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ಬಿ.ವಿ. ನಾಗರತ್ನ ಹಾಗೂ ತ್ರಿವೇದಿ ಸೇರಿ ಒಟ್ಟು ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. 2027ರಲ್ಲಿ ನ್ಯಾಯಮೂರ್ತಿ ನಾಗರತ್ನ ಅವರು ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT