ಗುರುವಾರ , ಮಾರ್ಚ್ 30, 2023
32 °C

ಬಾಂಬ್ ದಾಳಿ ಬೆದರಿಕೆಯನ್ನು ಪಂಜಾಬ್ ಸರ್ಕಾರ ಗಂಭೀರವಾಗಿ ಪರಿಗಣಿಸಲಿ: ಅಮರಿಂದರ್

ಪಿಟಿಐ Updated:

ಅಕ್ಷರ ಗಾತ್ರ : | |

ಚಂಡಿಗಡ: ಭಾರತ-ಪಾಕಿಸ್ತಾನ ಗಡಿ ಪ್ರದೇಶದ ಫಿರೋಜ್‌ಪುರ ಜಿಲ್ಲೆಯ ಜಮೀನೊಂದರಲ್ಲಿ ಬಾಂಬ್ ಇದ್ದ ಟಿಫಿನ್ ಬಾಕ್ಸ್ ಪತ್ತೆಯಾಗಿರುವುದನ್ನು ಪಂಜಾಬ್ ಸರ್ಕಾರ ಗಂಭೀರವಾಗಿ ಪರಿಗಣಿಸಬಹುದು ಎಂದು ಭಾವಿಸಿದ್ದೇನೆ. ಬಾಂಬ್ ದಾಳಿ ಬೆದರಿಕೆಯನ್ನು ಅಲ್ಲಗಳೆಯುತ್ತಿರುವ ಸ್ಥಿತಿಯಲ್ಲಿರುವ ರಾಜ್ಯ ಸರ್ಕಾರವು ಆ ಧೋರಣೆಯಿಂದ ಹೊರಬರಬೇಕು ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.

ಎರಡು ದಿನಗಳ ಹಿಂದೆ ಫಿರೋಜ್‌ಪುರ ಜಿಲ್ಲೆಯ ಅಲಿ ಕೇ ಗ್ರಾಮದ ಜಮೀನೊಂದರಲ್ಲಿ ಬಾಂಬ್‌ ಇಟ್ಟಿದ್ದ ಟಿಫಿನ್ ಬಾಕ್ಸ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಮೂವರು ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದರು.

ಓದಿ: 

ಈ ಕುರಿತು ಟ್ವೀಟ್ ಮಾಡಿರುವ ಅಮರಿಂದರ್ ಸಿಂಗ್, ‘ಪಂಜಾಬ್ ಸರ್ಕಾರ ಹಾಗೂ ಗೃಹ ಸಚಿವ ಸುಖ್‌ಜಿಂದರ್ ಸಿಂಗ್ ರಾಂಧಾವ ಅವರು ನಿರಾಕರಣೆಯ ಮನಸ್ಥಿತಿಯಿಂದ ಹೊರಬಂದು ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬ ಆಶಯ ಹೊಂದಿದ್ದೇನೆ’ ಉಲ್ಲೇಖಿಸಿದ್ದಾರೆ.

‘ಗಡಿಯಾಚೆಗಿನಿಂದ ಬರುವ ನಿರಂತರ ಬೆದರಿಕೆ ಮತ್ತು ಸವಾಲುಗಳನ್ನು ಎದುರಿಸಲು ವಿಶೇಷ ನಿಗಾ ವಹಿಸುವ ಮತ್ತು ವಿಸ್ತೃತ ಯೋಜನೆ ರೂಪಿಸುವ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.

ಭದ್ರತೆ ಹಾಗೂ ಸುರಕ್ಷತೆಗೆ ಸಂಬಂಧಿಸಿ ಅಮರಿಂದರ್ ಸಿಂಗ್ ಅವರು ಇತ್ತೀಚೆಗೆ ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಗೃಹ ಸಚಿವರು, ಇಂಥ ಹೇಳಿಕೆಗಳು ಜನರಲ್ಲಿ ಅನಗತ್ಯ ಭಯ ಮತ್ತು ಅಭದ್ರತೆಯ ಭಾವನೆ ಮೂಡಿಸುತ್ತವೆ ಎಂದಿದ್ದರು.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು