ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಹೊಸ ಅಬಕಾರಿ ನೀತಿ ಶಿಫಾರಸಿಗೆ ಸಂಪುಟ ಸಮಿತಿ

Last Updated 18 ಫೆಬ್ರವರಿ 2023, 12:47 IST
ಅಕ್ಷರ ಗಾತ್ರ

ಭೋಪಾಲ್‌: ‘ಹೊಸ ಅಬಕಾರಿ ನೀತಿ ಕುರಿತು ಶಿಫಾರಸುಗಳನ್ನು ನೀಡಲು ಮಧ್ಯ ಪ್ರದೇಶ ಸರ್ಕಾರವು ಸಂಪುಟ ಸಮಿತಿಯನ್ನು ರಚಿಸಿದೆ’ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಅವರು ನಿಯಂತ್ರಿತ ಅಬಕಾರಿ ನೀತಿಗಾಗಿ ಆಗ್ರಹ ಮಾಡಿರುವ ಮಧ್ಯೆಯೇ, ಸರ್ಕಾರ ಈ ಸಮಿತಿ ರಚಿಸಿದೆ.

‘ಹೊಸ ನೀತಿಯನ್ನು ಜನವರಿ 31ರಂದೇ ಘೋಷಿಸಬೇಕಿತ್ತು. ಆದರೆ, ಶಾಲೆ ಹಾಗೂ ಇತರೆ ಸಂಸ್ಥೆಗಳ ಸುತ್ತ ಮುತ್ತ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಇರುವ ಮದ್ಯದಂಗಡಿಗಳನ್ನು ಮುಚ್ಚುವುದು, ಅಹಾತಾಗಳನ್ನು (ಮದ್ಯ ಮಾರಾಟ ಮಾಡುವುದರ ಜೊತೆಗೆ ಸೇವನೆಗೂ ಅವಕಾಶವಿರುವ ಸ್ಥಳ) ಮುಚ್ಚವುದು ಸೇರಿದಂತೆ ಉಮಾ ಭಾರತಿ ಅವರು ವಿವಿಧ ಬೇಡಿಕೆಗಳನ್ನು ಇರಿಸಿದ್ದರಿಂದ ಈ ಘೋಷಣೆ ವಿಳಂಬವಾಯಿತು’ ಎಂದು ಮೂಲಗಳು ಹೇಳಿವೆ.

ಈ ಸಮಿತಿಯಲ್ಲಿ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್‌ ಮಿಶ್ರಾ, ಅರಣ್ಯ ಸಚಿವ ವಿಜಯ್‌ ಶಾ, ಹಣಕಾಸು ಹಾಗೂ ಅಬಕಾರಿ ಸಚಿವ ಜಗದೀಶ್‌ ದೇವಡಾ, ನಗರಾಭಿವೃದ್ಧಿ ಸಚಿವ ಭೂಪೇಂದ್ರ ಸಿಂಗ್ ಹಾಗೂ ಆರೋಗ್ಯ ಸಚಿವ ಪ್ರಭೂರಾಮ್‌ ಚೌಧರಿ ಅವರು ಸದಸ್ಯರಾಗಿರಲಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ ಸಮಿತಿಯ ಕಾರ್ಯದರ್ಶಿಯಾಗಿರಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT