ನವದೆಹಲಿ: ಪಗಾಸಸ್ ಗೂಢಚರ್ಯೆ ಆರೋಪದ ಕುರಿತಂತೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ವಿಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಜಕಾರಣಿಗಳು, ಪತ್ರಕರ್ತರು ಮತ್ತು ಇತರರ ಫೋನ್ಗಳ ಕಣ್ಗಾವಲಿನಲ್ಲಿ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿರುವ ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಪಿತೂರಿ ಮೂಲಕ ಭಾರತದ ಅಭಿವೃದ್ಧಿ ಹಳಿ ತಪ್ಪಿಸಲು ಬಯಸುವ ‘ಅಡ್ಡಿಪಡಿಸುವವರು ಅಡಚಣೆದಾರರಿಗೆ ಕೊಟ್ಟ ವರದಿ’ ಎಂದು ಹೇಳಿದ್ದಾರೆ.

ಮಾನ್ಸೂನ್ ಅಧಿವೇಶನದ ಮುನ್ನಾದಿನದಂದು ‘ಆಯ್ದ ಸೋರಿಕೆಗಳ‘ ಸಮಯವನ್ನು ಅವರು ಪ್ರಶ್ನಿಸಿದ್ದಾರೆಮತ್ತು ವಿಶ್ವ ವೇದಿಕೆಯಲ್ಲಿ ಭಾರತವನ್ನು ಅವಮಾನಿಸಲು ಸಾಧ್ಯವಾದದ್ದನ್ನು ಮಾಡುವುದು ಅವರ ಏಕೈಕ ಗುರಿಯಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.

‘ಈ ವರದಿಯು ‘ಅಡ್ಡಿಪಡಿಸುವವರು ಅಡಚಣೆದಾರರಿಗೆ’ ಕೊಟ್ಟಿದ್ದಾರೆ. ಅಡ್ಡಿಪಡಿಸುವವರು ಭಾರತದ ಪ್ರಗತಿ ಇಷ್ಟಪಡದ ಜಾಗತಿಕ ಸಂಸ್ಥೆಗಳು ಎಂದಿದ್ದಾರೆ.

‘ಭಾರತದಲ್ಲಿ ಪ್ರಗತಿಯನ್ನು ಬಯಸದ ಕೆಲ ರಾಜಕೀಯ ನಾಯಕರು ಅಡಚಣೆದಾರರು. ಕಾಲಾನುಕ್ರಮ ಮತ್ತು ಸಂಪರ್ಕವನ್ನು ಅರ್ಥಮಾಡಿಕೊಳ್ಳುವಷ್ಟು ಭಾರತದ ಜನರು ತುಂಬಾ ಬುದ್ಧಿವಂತರಾಗಿದ್ದಾರೆ’ ಎಂದು ಅವರು ಹೇಳಿದರು.

ಇಸ್ರೇಲಿ ಪೆಗಾಸಸ್ ಸ್ಪೈವೇರ್ ಬಳಸಿ ದೇಶದ ಪ್ರಮುಖ ವ್ಯಕ್ತಿಗಳ ಫೋನ್ ಟ್ಯಾಪ್ ಮಾಡಿದ ಆರೋಪದ ಮೇಲೆ ಪ್ರತಿಪಕ್ಷಗಳು ಸೋಮವಾರ ಸರ್ಕಾರವನ್ನು ಟೀಕಿಸಿವೆ ಮತ್ತು ಸ್ವತಂತ್ರ ನ್ಯಾಯಾಂಗ ಅಥವಾ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.