ಮಂಗಳವಾರ, ಮಾರ್ಚ್ 28, 2023
23 °C

ಅಜಂ ಖಾನ್‌ಗೆ ಜಾಮೀನು ವಿಳಂಬ: ಅಲಿಗಡ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಲಿಗಡ(ಉತ್ತರ ಪ್ರದೇಶ): ರಾಜಕೀಯ ಕಾರಣಗಳಿಂದಾಗಿ ಸಂಸದ ಅಜಂ ಖಾನ್‌ಗೆ ಉದ್ದೇಶಪೂರ್ವಕವಾಗಿ ಜಾಮೀನು ನೀಡುವುದಕ್ಕೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೋಮವಾರ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಅವರ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ತಕ್ಷಣವೇ ಜಾಮೀನು ನೀಡುವಂತೆ ಒತ್ತಾಯಿಸಿ, ರಾಷ್ಟ್ರಪತಿ ಮತ್ತು ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿಯವರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರತಿಭಟನೆ ನಂತರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಘದ ಮುಖಂಡ ವಾಸಿಮ್ ಅಲಿ ಮನವಿ ಪತ್ರಗಳನ್ನು ಮಾಧ್ಯಮದವರಿಗೆ ನೀಡಿದರು. ವಿದ್ಯಾರ್ಥಿ ಸಂಘದ ಮಾಜಿ ಕಾರ್ಯದರ್ಶಿ ಹುಜೈಫ್‌ ಅಮೀರ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ತಮ್ಮ ಪಕ್ಷದ ಸದಸ್ಯ ಅಜಂ ಖಾನ್ ಅವರ ಬೆಂಬಲಕ್ಕೆ ನಿಲ್ಲದೆ ಇರುವ ಬಗ್ಗೆ ವಿ.ವಿಯ ವಿದ್ಯಾರ್ಥಿಗಳು ತುಂಬಾ ಬೇಸರಗೊಂಡಿದ್ದಾರೆ‘ ಎಂದು ಹೇಳಿದರು.

ವಂಚನೆ ಮತ್ತಿತರ ಪ್ರಕರಣಗಳಲ್ಲಿ ಅಜಂ ಖಾನ್ ಅವರನ್ನು ಸಿತಾಪುರ್ ಜೈಲಿಗೆ ಕಳುಹಿಸಲಾಗಿತ್ತು. ಅನಾರೋಗ್ಯದ ಕಾರಣ ಇತ್ತೀಚೆಗೆ ಅವರನ್ನು ಲಖನೌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ... ಪೆಗಾಸಸ್ ಗೂಢಚರ್ಯೆ: ಸ್ವತಂತ್ರ ತನಿಖೆಗೆ ಆಗ್ರಹ, ಪತ್ರಕರ್ತರಿಂದ ಸುಪ್ರೀಂಗೆ ಅರ್ಜಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು