ನವದೆಹಲಿ: ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಉಕ್ರೇನ್ ಕಳುಹಿಸಿಕೊಟ್ಟಿರುವ ಆಮ್ಲಜನಕ ಸಾಂದ್ರಕಗಳು (ಆಕ್ಸಿಜನ್ ಕಾನ್ಸಂಟ್ರೇಟರ್) ಸೋಮವಾರ ಭಾರತ ತಲುಪಿವೆ.

184 ಆಮ್ಲಜನಕ ಸಾಂದ್ರಕಗಳನ್ನು ಹೊತ್ತ ಮೊದಲ ವಿಮಾನ ಉಕ್ರೇನ್‌ನಿಂದ ಇಂದು ಬೆಳಿಗ್ಗೆ ಬಂದಿಳಿದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

‘ಆಮ್ಲಜನಕ ಸಾಂದ್ರಕಗಳು ತಲುಪಿವೆ. ಉಕ್ರೇನ್‌ಗೆ ಧನ್ಯವಾದಗಳು’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

ಓದಿ:Covid-19 India Update: 1.52 ಲಕ್ಷ ಹೊಸ ಪ್ರಕರಣ, ಹೆಚ್ಚಿದ ಚೇತರಿಕೆ ಪ್ರಮಾಣ

ದೇಶವು ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿದ ಸಂದರ್ಭ ವೈದ್ಯಕೀಯ ಆಮ್ಲಜನಕದ ಕೊರತೆ ಉಂಟಾಗಿತ್ತು. ಸಂಕಷ್ಟದ ಸಂದರ್ಭದಲ್ಲಿ ಅನೇಕ ದೇಶಗಳು ಭಾರತದ ನೆರವಿಗೆ ಧಾವಿಸಿದ್ದವು.

ಕೋವಿಡ್ ವಿರುದ್ಧದ ಹೋರಾಟದಲ್ಲಿ ನೆರವಾಗಿದ್ದ ಅಮೆರಿಕ, ಸ್ವಿಟ್ಜರ್‌ಲೆಂಡ್, ಪೋಲೆಂಡ್, ನೆದರಲ್ಯಾಂಡ್ಸ್ ಮತ್ತು ಇಸ್ರೇಲ್ ಆಮ್ಲಜನಕ ಸಾಂದ್ರಕಗಳು, ರೆಮ್‌ಡಿಸಿವಿರ್ ಔಷಧ, ವೆಂಟಿಲೇಟರ್‌ಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.