ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರೋವರಕ್ಕೆ ಬಿದ್ದ ಸೇನಾ ಹೆಲಿಕಾಪ್ಟರ್: ಶೋಧ ಕಾರ್ಯ ಚುರುಕು

Last Updated 3 ಆಗಸ್ಟ್ 2021, 14:40 IST
ಅಕ್ಷರ ಗಾತ್ರ

ಕಥುವಾ, ಜಮ್ಮು ಮತ್ತು ಕಾಶ್ಮೀರ: ಸೇನೆಯ ಹೆಲಿಕಾಪ್ಟರ್‌ ಮಂಗಳವಾರ ಬೆಳಿಗ್ಗೆ 10.30ರಲ್ಲಿ ಅಪಘಾತಕ್ಕೆ ಗುರಿಯಾಗಿದ್ದು, ಇಲ್ಲಿನ ರಂಜಿತ್ ಸಾಗರ್ ಅಣೆಕಟ್ಟೆಯ ಸರೋವರಕ್ಕೆ ಬಿದ್ದಿದೆ. ಅದನ್ನು ಪತ್ತೆ ಮಾಡುವ ಕಾರ್ಯಾಚರಣೆ ಚುರುಕಿನಿಂದ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್‌ನ ಪಠಾಣ್‌ಕೋಟ್‌ನಿಂದ 30 ಕಿ.ಮೀ ದೂರದಲ್ಲಿ ಈ ಅಣೆಕಟ್ಟು ಇದ್ದು, ಸುಮಾರು 200 ಅಡಿ ಅಳವಿದೆ. ಕಥುವಾದ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಸಿ.ಕೊತ್ವಾಲ್‌ ಅವರು, ಪತ್ತೆ ಕಾರ್ಯಾಚರಣೆಗೆ ಬೋಟ್‌ಗಳನ್ನು ಬಳಸಲಾಗಿದೆ. ಹೆಲಿಕಾಪ್ಟರ್‌ನ ಕೆಲ ಅವಶೇಷಗಳು ಪತ್ತೆಯಾಗಿವೆ ಎಂದು ತಿಳಿಸಿದರು.

ಹೆಲಿಕಾಪ್ಟರ್‌ನಲ್ಲಿ ಎಷ್ಟು ಜನರಿದ್ದರು, ಅವರಿಗೆ ಏನು ಆಗಿದೆ ಎಂಬುದನ್ನು ಈ ಹಂತದಲ್ಲಿ ಹೇಳಲಾಗದು ಎಂದು ಅವರು ತಿಳಿಸಿದರು. ವರದಿಯೊಂದರ ಪ್ರಕಾರ, ಹೆಲಿಕಾಪ್ಟರ್‌ನಲ್ಲಿ ಇಬ್ಬರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT