ಶನಿವಾರ, ಸೆಪ್ಟೆಂಬರ್ 25, 2021
30 °C

ಜಮ್ಮುವಿಗೆ ನುಗ್ಗಲು ಗಡಿಯಲ್ಲಿ ಕಾಯುತ್ತಿರುವ 140ಕ್ಕೂ ಹೆಚ್ಚು ಉಗ್ರರು: ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು ಸುಮಾರು 140 ಭಯೋತ್ಪಾದಕರು ಗಡಿಯ ಲಾಂಚ್ ಪ್ಯಾಡ್‌ಗಳಲ್ಲಿ ಕಾಯುತ್ತಿದ್ದಾರೆ. ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದರೂ ಸಹ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಭಯೋತ್ಪಾದಕ ಮೂಲಸೌಕರ್ಯಗಳು ಹಾಗೆ ಇವೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ಕದನ ವಿರಾಮ ಒಪ್ಪಂದವು ಹೆಚ್ಚು ಮಹತ್ವದ್ದಾಗಿದೆ. ಏಕೆಂದರೆ ಅದು ಹಣಕಾಸಿನ ಕಾರ್ಯಪಡೆ (ಎಫ್‌ಎಟಿಎಫ್)ಯ ‘ಬೂದು ಪಟ್ಟಿ’ಯಿಂದ ಹೊರಬರಲು ತೀವ್ರವಾಗಿ ಪ್ರಯತ್ನಿಸುತ್ತಿದೆ. ಭಯೋತ್ಪಾದನೆ ಮೂಲಸೌಕರ್ಯವನ್ನು ಕೆಡವಿದ್ದರೆ, ಇಸ್ಲಾಮಾಬಾದ್‌ನ ಪ್ರಾಮಾಣಿಕತೆ ಬಗ್ಗೆ ಮಾತನಾಡಬಹುದಿತ್ತು ಎಂದು ಅಧಿಕಾರಿ ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಲಾಂಚ್ ಪ್ಯಾಡ್‌ಗಳಲ್ಲಿ ಸುಮಾರು 140 ಭಯೋತ್ಪಾದಕರು ಇರುವುದನ್ನು ಸೇನೆ ಗಮನಿಸಿದೆ. ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು ಕಾಯುತ್ತಿರಬಹುದು, ಆದರೆ, ನಮ್ಮ ಸೇನೆಯ ತಡೆಯೊಡ್ಡುವ ಪ್ರಯತ್ನದಿಂದಾಗಿ ಇದುವರೆಗೆ ಉಗ್ರರು ನುಸುಳಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

‘ಉಗ್ರರು ಈ ಹಿಂದೆ ಒಳನುಸುಳುವ ಪ್ರಯತ್ನ ನಡೆಸಿದ್ದರು. ಆದರೆ, ನಮ್ಮ ಸೇನೆ ಅವರ ಯತ್ನವನ್ನು ವಿಫಲಗೊಳಿಸಿದೆ. ಹಾಗಾಗಿ, ಮತ್ತೆ ಅವರು ಲಾಂಚ್ ಪ್ಯಾಡ್‌ಗಳಿಗೆ ಕಾಯುತ್ತಿದ್ದಾರೆ’ಎಂದಿದ್ದಾರೆ.

ಪಾಕಿಸ್ತಾನವು ಕದನ ವಿರಾಮದ ಅವಕಾಶವನ್ನು ಎಲ್‌ಒಸಿಯ ಉದ್ದಕ್ಕೂ ಭಯೋತ್ಪಾದಕರ ಮೂಲಸೌಕರ್ಯ ಬಲಪಡಿಸಲು ಬಳಸುತ್ತಿದೆ ಎಂದು ಸೇನಾಧಿಕಾರಿ ದೂರಿದ್ಧಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು