ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ಇದೇ 6ರಂದು ಕೇಜ್ರಿವಾಲ್‌ ರೋಡ್‌ ಶೋ

Last Updated 4 ಜೂನ್ 2022, 11:35 IST
ಅಕ್ಷರ ಗಾತ್ರ

ಅಹಮದಾಬಾದ್: ಆಮ್‌ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಗುಜರಾತ್‌ನ ಮೆಹ್‌ಸಾನಾ ನಗರದಲ್ಲಿ ಜೂನ್‌ 6ರಂದು ‘ತಿರಂಗಾ ಯಾತ್ರಾ’ ಮತ್ತು ರೋಡ್‌ ಶೋ ನಡೆಸಲಿದ್ದಾರೆ.

ವರ್ಷಾಂತ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಗುಜರಾತ್‌ಗೆ ಇದು ಅವರ ನಾಲ್ಕನೇ ಭೇಟಿ. ರೋಡ್ ಶೋ ವೇಳೆ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವರು ಎಂದು ಎಎಪಿ ಮುಖಂಡರೊಬ್ಬರು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಎಎಪಿ ಇದೆ ಎಂದು ಚುನಾವಣೆಯ ಪೂರ್ವದಲ್ಲಿ ಬಿಂಬಿಸಲು ಅವರು ಒತ್ತು ನೀಡುತ್ತಿದ್ದಾರೆ. ಇದು, ಗುಜರಾತ್‌ನಲ್ಲಿ ಅವರು ನಡೆಸುತ್ತಿರುವ ಎರಡನೇ ತಿರಂಗಾ ಯಾತ್ರೆಯಾಗಿರಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT