ಗುರುವಾರ , ಮಾರ್ಚ್ 30, 2023
22 °C

ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣ ದೆಹಲಿ ಎನ್‌ಸಿಬಿಗೆ ವರ್ಗಾವಣೆ: ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PTI Photo

ಮುಂಬಯಿ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಪತ್ತೆಯಾದ ಪ್ರಕರಣ ಮತ್ತು ಇತರ ಐದು ಪ್ರಕರಣಗಳನ್ನು  ಮಾದಕ ದ್ರವ್ಯ ನಿಯಂತ್ರಣ ಮಂಡಳಿಯು ದೆಹಲಿ ಎನ್‌ಸಿಬಿ ತಂಡಕ್ಕೆ ವರ್ಗಾಯಿಸಿದೆ.  ಶನಿವಾರ ಮುಂಬಯಿಗೆ ದೆಹಲಿ ಎನ್‌ಸಿಬಿ ತಂಡ ಆಗಮಿಸುತ್ತಿದ್ದು, ತನಿಖೆ ಆರಂಭಿಸಲಿದೆ.

ಪ್ರಕರಣ ವರ್ಗಾವಣೆ ಕುರಿತು ಎನ್‌ಸಿಬಿ ಘೋಷಣೆ ಮಾಡಿದ ಬಳಿಕ, ಎನ್‌ಸಿಬಿ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ಈ ಕುರಿತು ಎಎನ್‌ಐಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮನ್ನು ತನಿಖಾ ತಂಡದಿಂದ ತೆಗೆದು ಹಾಕಿಲ್ಲ. ಆದರೆ ಪ್ರಕರಣವನ್ನು ದೆಹಲಿ ಮತ್ತು ಮುಂಬಯಿ ತಂಡಗಳು ಜಂಟಿಯಾಗಿ ತನಿಖೆ ನಡೆಸಲಿವೆ ಎಂದು ಸಮೀರ್‌ ವಾಂಖೆಡೆ ತಿಳಿಸಿದ್ದಾರೆ.

'ತನಿಖಾ ತಂಡದಿಂದ ತಮ್ಮನ್ನು ಕೈಬಿಡಲಾಗಿಲ್ಲ. ಕೇಂದ್ರದ ಏಜೆನ್ಸಿ ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಕೋರ್ಟ್‌ಗೆ ನಾನು ಮನವಿ ಸಲ್ಲಿಸಿದ್ದೆ. ಹಾಗಾಗಿ ಆರ್ಯನ್‌ ಪ್ರಕರಣ ಮತ್ತು ಸಮೀರ್‌ ಖಾನ್‌ ಪ್ರಕರಣವನ್ನು ದೆಹಲಿ ಎನ್‌ಸಿಬಿಯ ಎಸ್‌ಐಟಿ ತಂಡ ತನಿಖೆ ನಡೆಸಲಿದೆ. ದೆಹಲಿ ಮತ್ತು ಮುಂಬಯಿ ಎನ್‌ಸಿಬಿ ತಂಡಗಳ ಪರಸ್ಪರ ಹೊಂದಾಣಿಕೆಯಿದು' ಎಂದು ವಾಂಖೆಡೆ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು