ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ ಪ್ರತಿ ವಿದ್ಯಾರ್ಥಿನಿಗೆ ನಿತ್ಯ ₹100 ಪ್ರೋತ್ಸಾಹಧನ

Last Updated 4 ಜನವರಿ 2021, 13:44 IST
ಅಕ್ಷರ ಗಾತ್ರ

ಗುವಾಹಟಿ: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ, ವಿಶೇಷವಾದ ಯೋಜನೆಯೊಂದನ್ನು ಅಸ್ಸಾಂ ಸರ್ಕಾರ ಜಾರಿಗೆ ತಂದಿದ್ದು, ‘ಶಾಲೆಗೆ ಹೋಗುವ ಪ್ರತಿ ವಿದ್ಯಾರ್ಥಿನಿಗೂ ದಿನಕ್ಕೆ ₹100 ಪ್ರೋತ್ಸಾಹಧನ ದೊರೆಯಲಿದೆ’ ಎಂದು ರಾಜ್ಯದ ಶಿಕ್ಷಣ ಸಚಿವ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.

‘ಪ್ರಸ್ತುತ, ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ದ್ವಿತೀಯ ಪಿಯು ವಿದ್ಯಾರ್ಥಿನಿಯರಿಗೆ 22 ಸಾವಿರ ದ್ವಿಚಕ್ರ ವಾಹನಗಳನ್ನು ಪ್ರಗ್ಯಾನ್‌ ಭಾರತಿ ಯೋಜನೆಯಡಿ ರಾಜ್ಯ ಸರ್ಕಾರ ವಿತರಿಸುತ್ತಿದೆ. ಈ ಯೋಜನೆಗಾಗಿ ₹144.30 ಕೋಟಿ ವೆಚ್ಚವಾಗಲಿದೆ. ಈ ಯೋಜನೆಯನ್ನು ಮಾಸಾಂತ್ಯದೊಳಗಾಗಿ ಉದ್ಘಾಟಿಸಲಾಗುವುದು’ ಎಂದು ಶರ್ಮಾ ಮಾಹಿತಿ ನೀಡಿದರು. ಆದರೆ, ಈ ಯೋಜನೆಯ ಅನುಷ್ಠಾನಕ್ಕಾಗಿ ಅಗತ್ಯವಿರುವ ಆರ್ಥಿಕ ವೆಚ್ಚದ ವಿವರಣೆಯನ್ನು ಅವರು ನೀಡಿಲ್ಲ.

‘ವಿದ್ಯಾರ್ಥಿನಿಯರ ಸಂಖ್ಯೆ ಲಕ್ಷ ದಾಟಿದರೂ, ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿನಿಯರಿಗೂ ಸ್ಕೂಟರ್‌ಗಳನ್ನು ಸರ್ಕಾರ ನೀಡಲಿದೆ. 2018 ಹಾಗೂ 2019ರಲ್ಲಿ ದ್ವಿತೀಯ ಪಿಯು ಪರೀಕ್ಷೆಯನ್ನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೂ ಸ್ಕೂಟರ್‌ಗಳನ್ನು ನೀಡಲಾಗುವುದು. ಪುಸ್ತಕ ಹಾಗೂ ಇತರೆ ಅಧ್ಯಯನ ಸಾಮಾಗ್ರಿಗಳ ಖರೀದಿಗಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಖಾತೆಗೆ ಮಾಸಾಂತ್ಯದೊಳಗಾಗಿ ₹1,500 ಹಾಗೂ ₹2 ಸಾವಿರವನ್ನು ಜಮೆ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT