ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live | ಪಶ್ಚಿಮ ಬಂಗಾಳ: ಶಿಷ್ಯ ಸುವೇಂದು ಅಧಿಕಾರಿ ಎದುರು 1,956 ಮತಗಳ ಅಂತರದಿಂದ ಸೋತ ಮಮತಾ ಬ್ಯಾನರ್ಜಿ
LIVE

4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಗಳ ಮತ ಎಣಿಕೆ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಎಲ್‌ಡಿಎಫ್ ಮುನ್ನಡೆ ಸಾಧಿಸಿವೆ. ಅಸ್ಸಾಂನಲ್ಲಿ ಎನ್‌ಡಿಎ ಬಹುಮತ್ತ ದಾಪುಗಾಲಿಟ್ಟಿದೆ.
Last Updated 3 ಮೇ 2021, 2:28 IST
ಅಕ್ಷರ ಗಾತ್ರ
01:5403 May 2021

ಶಿಷ್ಯ ಸುವೇಂದು ಎದುರು 1,956 ಮತಗಳ ಅಂತರದಿಂದ ಸೋತ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಂಡಿರುವ ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ತಮ್ಮ ಶಿಷ್ಯ ಸುವೇಂದು ಅಧಿಕಾರಿ ವಿರುದ್ಧ 1,956 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿ ಪ್ರಕಾರ, ಸುವೇಂದು ಅಧಿಕಾರಿ 1,10,764 ಮತಗಳನ್ನು ಪಡೆದರೆ, ಮಮತಾ ಬ್ಯಾನರ್ಜಿ 1,08,808 ಮತಗಳನ್ನು ಪಡೆದು 1,956 ಮತಗಳ ಅಂತರದಿಂದ ಸೋತಿದ್ದಾರೆ.

ಈ ಮೊದಲು ಮತ ಎಣಿಕೆಯ ಅಂತ್ಯದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಗೆದ್ದಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ, ಬಳಿಕ ಚುನಾವಣಾ ಆಯೋಗವು ಮಮತಾ ಸೋತಿದ್ದಾರೆ ಎಂದು ಹೇಳಿತು.

ಮತ ಎಣಿಕೆಯ ಮೊದಲ ಸುತ್ತಿನಲ್ಲೇ ಸುವೇಂದು 8,000 ಮತಗಳ ಮುನ್ನಡೆ ಪಡೆದಿದ್ದರು. ಬಳಿಕ, ಮಮತಾ ಬ್ಯಾನರ್ಜಿ ಕಮ್ ಬ್ಯಾಕ್ ಮಾಡಿದರು. ಅಲ್ಪ ಅಂತರದಲ್ಲೇ ಹಾವು–ಏಣಿ ಆಟ ಮುಂದುವರೆದಿತ್ತು. ಅಂತಿಮವಾಗಿ ಗುರುವಿನ ವಿರುದ್ಧ ಶಿಷ್ಯನ ಗೆಲುವಾಗಿದೆ.

ಈ ಮೊದಲು ಮಮತಾ ಬ್ಯಾನರ್ಜಿ ಗೆದ್ದಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ, ಬಳಿಕ ಚುನಾವಣಾ ಆಯೋಗವು ಮಮತಾ ಸೋತಿದ್ಧರೆ ಎಂದು ಹೇಳಿತು.

ಮತ ಎಣಿಕೆ ಮೊದಲ ಸುತ್ತಿನಲ್ಲೇ ಸುವೇಂದು 8,000 ಮತಗಳ ಮುನ್ನಡೆ ಪಡೆದಿದ್ದರು. ಬಳಿಕ, ಮಮಮತಾ ಬ್ಯಾನರ್ಜಿ ಕಮ್ ಬ್ಯಾಕ್ ಮಾಡಿದರು. ಅಲ್ಪ ಅಂತರದಲ್ಲೇ ಹಾವು–ಏಣಿ ಆಟ ಮುಂದುವರೆದಿತ್ತು. ಅಂತಿಮವಾಗಿ ಗುರುವಿನ ವಿರುದ್ಧ ಶಿಷ್ಯನ ಗೆಲುವಾಗಿದೆ.

ನಂದಿಗ್ರಾಮದ ಸೋಲಿನ ಬಗ್ಗೆ ಚಿಂತಿಸಬೇಡಿ, ನಾನು ನಂದಿಗ್ರಾಮದಲ್ಲಿ ಚಳವಳಿ ನಡೆಸಿದ್ದ ಕಾರಣ ಅದಕ್ಕಾಗಿ ಸೆಣಸಿದೆ. ಪರವಾಗಿಲ್ಲ. ನಂದಿಗ್ರಾಮದ ಜನರು ತಮಗೆ ಬೇಕಾದ ಯಾವುದೇ ತೀರ್ಪು ನೀಡಲಿ, ನಾನು ಅದನ್ನು ಸ್ವೀಕರಿಸುತ್ತೇನೆ. ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾವು 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ ಮತ್ತು ಬಿಜೆಪಿ ಚುನಾವಣೆಯಲ್ಲಿ ಸೋತಿದೆ ಎಂದು ಮಮತಾ ಹೇಳಿದ್ದಾರೆ.
 

16:1902 May 2021

ಪುದುಚೇರಿ: ಎನ್‌ಡಿಎ ಅಧಿಕಾರಕ್ಕೆ, ಕಾಂಗ್ರೆಸ್‌ ಸೋಲು

ಕೇಂದ್ರಾಡಳಿತ ಪ್ರದೇಶದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವಲ್ಲಿ ವಿಪಲವಾಗಿದೆ. ಬಿಜೆಪಿ, ಎನ್‌ಆರ್‌ಸಿ, ಎಐಎಡಿಎಂಕೆ ಒಕ್ಕೂಟದ ಎನ್‌ಡಿಎ ಅಧಿಕಾರಕ್ಕೆ ಬಂದಿದೆ. 

ಫಲಿತಾಂಶ: ಎನ್‌ಡಿಎ –16, ಕಾಂಗ್ರೆಸ್‌ –9, ಇತರೆ –5

15:3402 May 2021

ಅಸ್ಸಾಂನಲ್ಲಿ ಕೇಸರಿ ಕಮಾಲ್‌: ಎರಡನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ...

ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್‌ ಕೂಡ ಗಮನಾರ್ಹ ಸಾಧನೆ ಮಾಡುವ ಮೂಲಕ ಪ್ರಮುಖ ವಿರೋಧ ಪಕ್ಷವಾಗಿದೆ.

ಫಲಿತಾಂಶ: ಬಿಜೆಪಿ –73, ಕಾಂಗ್ರೆಸ್‌ –52, ಇತರೆ –1

14:0102 May 2021

ಕೇರಳದಲ್ಲಿ ಕೆಂಪು ಸುನಾಮಿ: ಬಿಜೆಪಿ ಶೂನ್ಯ ಸಂಪಾದನೆ

ಕೇರಳದಲ್ಲಿ ಎಡ ಪಕ್ಷಗಳು ಭರ್ಜರಿ ಗೆಲುವು ದಾಖಲಿಸಿವೆ. ಈ ಸಲ ಯುಡಿಎಫ್‌ ಮತ್ತೆ ವಿರೋಧ ಪಕ್ಷದ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 5 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದ ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ.

ಫಲಿತಾಂಶ: ಎಲ್‌ಡಿಎಫ್‌–99, ಯುಡಿಎಫ್‌ –41, ಎನ್‌ಡಿಎ–00

13:1002 May 2021

ನಂದಿಗ್ರಾಮದಲ್ಲಿ ಇನ್ನು ಕೆಲವು ಮತಗಳ ಎಣಿಕೆ ಬಾಕಿ

ನಂದಿಗ್ರಾಮದಲ್ಲಿ ಇನ್ನು ಕೆಲವು ಮತಗಳ ಎಣಿಕೆ ಬಾಕಿ ಇದೆ. ಮತ ಎಣಿಕೆ ಪೂರ್ಣವಾದ ಬಳಿಕ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣೆ ಆಯೋಗ ತಿಳಿಸಿದೆ

12:5502 May 2021

ಮಮತಾಗೆ ನಂದಿಗ್ರಾಮದಲ್ಲಿ 1622 ಮತಗಳ ಅಂತರದ ಸೋಲು: ಮರು ಎಣಿಕೆಗೆ ಟಿಎಂಸಿ ಅರ್ಜಿ

12:3602 May 2021

ತಮಿಳುನಾಡು: 153 ಸ್ಥಾನಗಳಲ್ಲಿ ಡಿಎಂಕೆ ಗೆಲುವು, ಸ್ಟಾಲಿನ್‌ ಅಧಿಕಾರಕ್ಕೆ...

12:0602 May 2021

ಕೇರಳ’ ಮೆಟ್ರೋಮ್ಯಾನ್ ಶ್ರೀಧರನ್ ಸೋಲು

11:0602 May 2021

ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿಗೆ 1200 ಮತಗಳ ಅಂತರದ ಗೆಲುವು

10:4402 May 2021

ತಮಿಳುನಾಡು ಚುನಾವಣೆ ಫಲಿತಾಂಶ: ರಘುರಾಮನ್ ಮುನ್ನಡೆ

ಡಿಎಂಕೆ ಅಭ್ಯರ್ಥಿ ಎ ಆರ್‌ಆರ್‌ ರಘುರಾಮನ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಎಐಎಡಿಎಂಕೆ ಅಭ್ಯರ್ಥಿ ಆರ್.ಕೆ.ರವಿಂದ್ರನ್ ಅವರಿಗಿಂತ 6194 ಮತಗಳ ಅಂತರದಿಂದ ಮುಂದಿದ್ದಾರೆ.
ರಘುರಾಮನ್‌ 48,346 ಮತಗಳನ್ನು ಪಡೆದಿದ್ದರೆ, ರವಿಚಂದ್ರನ್ 42,152 ಮತಗಳನ್ನು ಪಡೆದಿದ್ದಾ