ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ ವಿಧಾನಸಭೆ ಚುನಾವಣೆ: ಮತ ಸೆಳೆಯಲು ಗಾಯಕರ ಮೊರೆ ಹೋದ ಪಕ್ಷಗಳು

Last Updated 24 ಜನವರಿ 2022, 7:13 IST
ಅಕ್ಷರ ಗಾತ್ರ

ಚಂಡೀಗಡ: ಪಂಜಾಬ್‌ನ ಜನಪ್ರಿಯ ಹಾಡುಗಾರರಲ್ಲಿ ಹಲವರು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಮತದಾರರನ್ನು ಸೆಳೆಯಲು ಈ ಗಾಯಕರ ಜನಪ್ರಿಯತೆಯನ್ನು ಪಕ್ಷಗಳು ನೆಚ್ಚಿಕೊಂಡಿವೆ.

ಪಂಜಾಬಿ ಪಾಪ್‌ ಸಂಸ್ಕೃತಿ ಹೆಚ್ಚುಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಜನಪ್ರಿಯ ಗಾಯಕರನ್ನು ಕಣಕ್ಕೆ ಇಳಿಸಿದರೆ ಜನರ ಜತೆ ಸಂಪರ್ಕ ಸುಲಭ ಎಂದು ಪಕ್ಷಗಳು ನಂಬಿವೆ.

ಜನಪ್ರಿಯ ಹಾಡುಗಾರ ಶುಭದೀಪ್‌ ಸಿಂಗ್ ಸಂಧು ಅವರನ್ನು ಕಾಂಗ್ರೆಸ್ ಪಕ್ಷವು ಮನ್ಸಾ ಕ್ಷೇತ್ರದಿಂದ ಕಣಕ್ಕೆ ಇಳಿಸಿದೆ. ಸಿಧು ಮೂಸೇವಾಲಾ ಎಂದೇ ಖ್ಯಾತರಾಗಿರುವ ಅವರು, ಪಂಜಾಬ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ನಿಕಟವರ್ತಿ. ಗಾಯಕರಾದ ಅನ್ಮೋಲ್‌ ಗಗನ್‌ ಮಾನ್‌ ಮತ್ತು ಬಲ್ಕರ್‌ ಸಿಧು ಅವರಿಗೆ ಎಎಪಿ ಟಿಕೆಟ್‌ ನೀಡಿದೆ.

ಮೂಸೇವಾಲಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್‌ಗಳು ಇದ್ದಾರೆ. ಮೂಸೇವಾಲಾ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಚುನಾವಣಾ ಪ್ರಚಾರ ನಡೆಸುತ್ತಿದ್ಧಾರೆ.

ನಟ ಮತ್ತು ಸಮಾಜ ಸೇವಕ ಸೋನು ಸೂದ್‌ ಅವರ ಜನಪ್ರಿಯತೆಯನ್ನೂ ಬಳಸಿಕೊಳ್ಳಲು ಕಾಂಗ್ರೆಸ್‌ ಮುಂದಾಗಿದೆ. ಸೋನು ಅವರ ತಂಗಿ ಮಾಳವಿಕಾ ಅವರಿಗೆ ಮೊಗಾ ಕ್ಷೇತ್ರದಿಂದ ಟಿಕೆಟ್‌ ನೀಡಿದೆ.

ಖ್ಯಾತನಾಮರನ್ನು ಚುನಾವಣೆಗೆ ಬಳಸಿಕೊಳ್ಳುವುದು ಇದೇ ಮೊದಲೇನೂ ಅಲ್ಲ. ಪಂಜಾಬಿ ಗಾಯಕ ಮೊಹಮ್ಮದ್‌ ಸಿದ್ದಿಕ್‌ ಅವರು ಫರೀದ್‌ಕೋಟ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಸದಸ್ಯ. ಗುರುದಾಸ್‌ಪುರದ ಬಿಜೆಪಿ ಸಂಸದ ಸನ್ನಿಡಿಯೋಲ್‌ ಜನಪ್ರಿಯ ನಟ. ಈ ಕ್ಷೇತ್ರವನ್ನು ನಟ ವಿನೋದ್‌ ಖನ್ನಾ ಹಿಂದೆ ಪ್ರತಿನಿಧಿಸಿದ್ದರು.

ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ ಮಾನ್‌ ಅವರು ರಾಜಕೀಯಕ್ಕೆ ಬರುವ ಮೊದಲು ಜನಪ್ರಿಯ ಕಾಮಿಡಿಯನ್‌ ಆಗಿದ್ದರು. ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಕ್ರಿಕೆಟ್‌ ಆಟಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT