ಅಖಿಲೇಶ್, ಮುಲಾಯಂ ಭೇಟಿಯಾಗದ ಆಜಂ ಖಾನ್: ಶಿವಪಾಲ್ ಜತೆ ಮಾತುಕತೆ

ಲಖನೌ: ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಆಜಂ ಖಾನ್ ನಡುವಣ ಮನಸ್ತಾಪ ಮತ್ತಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.
ಆಜಂ ಖಾನ್ ಎರಡು ದಿನಗಳ ಲಖನೌ ಭೇಟಿಯಲ್ಲಿದ್ದು, ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗದೆ, ಮತ್ತೊಬ್ಬ ಭಿನ್ನಮತೀಯ ನಾಯಕ ಶಿವಪಾಲ್ ಯಾದವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ವಿಧಾನಸಭೆಗೆ ತೆರಳಿ ಸ್ಪೀಕರ್ ಸತೀಶ್ ಮಹನ್ ಅವರ ಕೊಠಡಿಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಆಜಂ ಖಾನ್, ಬಳಿಕ ಅಖಲೇಶ್ ಅವರನ್ನು ಭೇಟಿಯಾಗಲಿಲ್ಲ. ಅಖಿಲೇಶ್ ಸಹ ಆಜಂ ಖಾನ್ ಅವರನ್ನು ಭೇಟಿಯಾಗುವ ಒಲವು ತೋರಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶ ವಿಧಾನಸಭೆ ಕಲಾಪ: 2ನೇ ದಿನವೂ ಗೈರಾದ ಆಜಂ ಖಾನ್
ಎರಡೂ ದಿನ ಶಿವಪಾಲ್ ಯಾದವ್ ಅವರ ಜತೆ ಆಜಂ ಖಾನ್ ರಹಸ್ಯ ಮಾತುಕತೆ ನಡೆಸಿದ್ದಾರೆ. ಸಮಾಜವಾದಿ ಪಕ್ಷದ ಮಾಜಿ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರನ್ನೂ ಭೇಟಿಯಾಗಿಲ್ಲ.
ಈ ಕುರಿತು ಪ್ರತಿಕ್ರಿಯೆ ನೀಡಿದ ಖಾನ್, ‘ನಾನು ಚಿಕ್ಕವ. ಯಾರಾದರೂ ನನ್ನನ್ನು ಭೇಟಿ ಮಾಡಲು ಬಂದರೆ ನಾನು ಕೃತಜ್ಞನಾಗಿದ್ದೇನೆ. ದೊಡ್ಡ ನಾಯಕರು ನನ್ನನ್ನು ಏಕೆ ಭೇಟಿ ಮಾಡಬೇಕು? ಬಹುಶಃ ಅವರ ಬಳಿ ನನ್ನ ದೂರವಾಣಿ ಸಂಖ್ಯೆ ಇಲ್ಲದಿರಬಹುದು’ ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಜೈಲಿನಿಂದ ಬಿಡುಗಡೆ
ಮೂಲಗಳ ಪ್ರಕಾರ, ಆಜಂ ಖಾನ್ ಹಾಗೂ ಶಿವಪಾಲ್ ಯಾದವ್ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಸುಮಾರು 87 ಪ್ರಕರಣಗಳಿಗೆ ಸಂಬಂಧಿಸಿ ಬಂಧಿತರಾಗಿದ್ದ ಆಜಂ ಖಾನ್ ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯ ಜೈಲಿನಿಂದ ಬಿಡುಗಡೆಯಾಗಿದ್ದರು.
ನಾನು ನಡೆಯುವುದು ಕಲಿಸಿದೆ, ಆತ ತುಳಿದ: ಮುಲಾಯಂ ತಮ್ಮ ಶಿವಪಾಲ್ ಬಹಿರಂಗ ಆಕ್ರೋಶ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.