ಗುವಾಹಟಿ: ಗೋಮಾಂಸ ಸೇವನೆ ಬಿಟ್ಟುಬಿಡುವಂತೆ ಅಸ್ಸಾಂನ ಮುಸ್ಲಿಮರಲ್ಲಿ ಮನವಿ ಮಾಡುವುದಾಗಿ ಎಐಯುಡಿಎಫ್ ಮುಖ್ಯಸ್ಥ ಮೌಲಾನಾ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ. ಇದರಿಂದ ಗೋಮಾಂಸ ಮಾರಾಟ ಮತ್ತು ಸೇವನೆ ನಿಯಂತ್ರಿಸಲು ಮುಂದಾಗಿರುವ ಬಿಜೆಪಿ ಸರ್ಕಾರಕ್ಕೆ ನೆರವಾಗಬಹುದು ಎನ್ನಲಾಗಿದೆ.
ಆಗಸ್ಟ್ 13ರಂದು ಅನುಮೋದನೆ ಪಡೆಯಲಾಗಿರುವ ‘ಅಸ್ಸಾಂ ಜಾನುವಾರು ರಕ್ಷಣಾ ಕಾಯ್ದೆ 2021’ರ ಬಗ್ಗೆ ಅಜ್ಮಲ್ ಬಳಿ ಪ್ರತಿಕ್ರಿಯೆ ಕೋರಲಾಗಿತ್ತು. ಇದಕ್ಕೆ ಉತ್ತರಿಸಿದ ಅವರು, ಗೋಮಾಂಸ ಸೇವನೆ ತ್ಯಜಿಸುವಂತೆ ಅಸ್ಸಾಂನ ಮುಸ್ಲಿಮರಲ್ಲಿ ಮನವಿ ಮಾಡುವೆ ಎಂದಷ್ಟೇ ಹೇಳಬಲ್ಲೆ’ ಎಂದು ಹೇಳಿದ್ದಾರೆ.
ಹಿಂದೂ ಮತ್ತು ಇತರ ಗೋಮಾಂಸ ಸೇವನೆ ಮಾಡದ ಸಮುದಾಯದವರ ಪ್ರಾಬಲ್ಯ ಇರುವ ಪ್ರದೇಶದ, ದೇಗುಲ, ಹಿಂದೂ ಧಾರ್ಮಿಕ ಸಂಸ್ಥೆಗಳ 5 ಕಿ.ಮೀ ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ, ಸೇವನೆ ನಿಷೇಧಿಸುವ ಬಗ್ಗೆ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಇತರ ರಾಜ್ಯಗಳಿಗೆ ಮತ್ತು ಇತರ ರಾಜ್ಯಗಳಿಂದ ಅಸ್ಸಾಂಗೆ ಜಾನುವಾರು ಸಾಗಾಟವನ್ನು ಕಾಯ್ದೆ ನಿಷೇಧಿಸುತ್ತದೆ. ಅನುಮತಿ ಇಲ್ಲದೆ ಇತರ ರಾಜ್ಯಗಳಿಂದ ಅಸ್ಸಾಂ ಮೂಲಕ ಬೇರೆ ರಾಜ್ಯಗಳಿಗೆ ಗೋಮಾಂಸ ಮಾರಾಟ ಮಾಡುವುದನ್ನೂ ನಿಷೇಧಿಸುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.