ಶನಿವಾರ, ಅಕ್ಟೋಬರ್ 31, 2020
25 °C
ದೆಹಲಿ ನ್ಯಾಯಾಲಯ ತೀರ್ಪು

ಬ್ಯಾಂಕ್‌ಗೆ ₹8100 ಕೋಟಿ ವಂಚನೆ: ಎಸ್‌ಬಿಎಲ್‌ನ ನಾಲ್ವರು ನಿರ್ದೇಶಕರು ಅಪರಾಧಿಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆಂಧ್ರ ಬ್ಯಾಂಕ್‌ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ₹8,100 ಕೋಟಿ ವಂಚಿಸಿದ ಪ್ರಕರಣದಲ್ಲಿ ಗುಜರಾತ್‌ ಮೂಲದ ಫಾರ್ಮಾ ಕಂಪನಿ ಸ್ಟರ್ಲಿಂಗ್‌ ಬಯೋಟೆಕ್‌ನ(ಎಸ್‌ಬಿಎಲ್‌) ನಾಲ್ವರು ನಿರ್ದೇಶಕರನ್ನು ‘ಪರಾರಿಯಾಗಿರುವ ಅಪರಾಧಿಗಳು’ ಎಂದು ದೆಹಲಿ ನ್ಯಾಯಾಲಯವೊಂದು ಸೋಮವಾರ ಘೋಷಿಸಿದೆ.

ಜಾರಿ ನಿರ್ದೇಶನಾಲಯ(ಇ.ಡಿ) ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಧರ್ಮೇಂದ್ರ ರಾಣಾ, ಈ ತೀರ್ಪು ಪ್ರಕಟಿಸಿದ್ದಾರೆ.

‘ಆರೋಪಿಗಳಾದ ನಿತಿನ್‌ ಜಯಂತಿಲಾಲ್‌ ಸಂದೇಸ್ರ, ಚೇತನ್ ಜಯಂತಿಲಾಲ್‌ ಸಂದೇಸ್ರ, ದೀಪ್ತಿ ಜಯಂತಿಲಾಲ್‌ ಸಂದೇಸ್ರ ಹಾಗೂ ಹಿತೇಶ್‌ ಕುಮಾರ್‌ ನರೇಂದ್ರಭಾಯಿ ಪಟೇಲ್‌ ಅವರು ಆರ್ಥಿಕ ಅಪರಾಧಿಗಳು’ ಎಂದು ಘೋಷಿಸಿದ್ದಾರೆ.

ಇವರೆಲ್ಲರೂ ದೇಶದಿಂದ ಪರಾರಿಯಾಗಿದ್ದಾರೆ ಎಂದು ಇ.ಡಿ ಪರವಾಗಿ ವಾದಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್.ವಿ.ರಾಜು ನ್ಯಾಯಾಲಯದ ಗಮನಕ್ಕೆ ತಂದರು. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವರನ್ನು ಆರ್ಥಿಕ ಅಪರಾಧಿಗಳು ಎಂದು ಘೋಷಿಸಲು ಮನವಿ ಮಾಡಲಾಗಿತ್ತು. ಅಪರಾಧಿಗಳು ಬ್ಯಾಂಕ್‌ನಿಂದ ಸಾಲ ಪಡೆದು ಅದನ್ನು ಮರುಪಾವತಿಸಿರಲಿಲ್ಲ ಎಂದು ಇ.ಡಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು