ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಹೆಚ್ಚಳ: ಮಿಜೋರಾಂನಲ್ಲಿ ಮನೆ ಒಳಗೂ ಇಡೀ ದಿನ ಮಾಸ್ಕ್ ಧರಿಸಲು ಸೂಚನೆ

Last Updated 13 ಅಕ್ಟೋಬರ್ 2021, 2:24 IST
ಅಕ್ಷರ ಗಾತ್ರ

ಐಜ್ವಾಲ್: ಕೋವಿಡ್ ಪ್ರಕರಣಗಳ ಏರಿಕೆ ತಡೆಯಲಾರದೆ ಕಂಗೆಟ್ಟಿರುವ ಮಿಜೋರಾಂ ಸರ್ಕಾರ ಮನೆಯ ಒಳಗೂ ಇಡೀ ದಿನ, ಪ್ರತಿ ದಿನ (24/7) ಮಾಸ್ಕ್ ಧರಿಸುವಂತೆ ಸೂಚಿಸಿದೆ. ಮನೆ ಮಂದಿಯೆಲ್ಲ ಜತೆಯಾಗಿ ಕುಳಿತುಕೊಂಡು ಊಟ ಮಾಡದಂತೆಯೂ ಸಲಹೆ ನೀಡಿದೆ.

‘ಮಾಸ್ಕ್ ಧರಿಸಿ, ಇದರಿಂದ ನೀವು ಆಮ್ಲಜನಕದ ಮಾಸ್ಕ್ ಧರಿಸಬೇಕಾಗಿ ಬರುವುದಿಲ್ಲ’ ಎಂಬ ಘೋಷಣೆಯೊಂದಿಗೆ 10 ದಿನಗಳ ‘ಆಲ್ ಮಾಸ್ಕ್’ ಅಭಿಯಾನವನ್ನು ಸರ್ಕಾರ ಹಮ್ಮಿಕೊಂಡಿದೆ. ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಕೋವಿಡ್ ಪಾಸಿಟಿವಿಟಿ ದರ ಶೇ 15ರಿಂದ 30ರ ನಡುವೆ ಇರುವ ಕಾರಣ ಸರ್ಕಾರ ಈ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಊಟ ಮಾಡುವ ಸಮಯ ಹೊರತುಪಡಿಸಿ ಮತ್ತೆಲ್ಲಾ ಸಂದರ್ಭದಲ್ಲಿಯೂ ಮನೆ ಒಳಗೂ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗುತ್ತಿದೆ. ಆಗಾಗ ಕೈಗಳನ್ನು ಸ್ವಚ್ಛಗೊಳಿಸುವಂತೆಯೂ ಸ್ಯಾನಿಟೈಸರ್‌ಗಳನ್ನು ಬಳಸುವಂತೆಯೂ ತಿಳಿಹೇಳಲಾಗುತ್ತಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಕಳೆದ ತಿಂಗಳಿನಿಂದ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿರುವ ಕಾರಣ ತಜ್ಞರ ಸಲಹೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಒಂದು ತಿಂಗಳಿಂದೀಚೆಗೆ ಮಿಜೋರಾಂನಲ್ಲಿ ಪ್ರತಿ ದಿನ 1,000ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗಿದ್ದು, ಚಿಕಿತ್ಸೆಗೂ ತೊಡಕಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT