ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯುತ ಸತ್ಯಾಗ್ರಹ ಸರ್ಕಾರಕ್ಕೆ ಇಷ್ಟವಾಗಿಲ್ಲ; ಅದಕ್ಕಾಗಿ ಭಾರತ್ ಬಂದ್‌-ರಾಹುಲ್

Last Updated 27 ಸೆಪ್ಟೆಂಬರ್ 2021, 5:15 IST
ಅಕ್ಷರ ಗಾತ್ರ

ನವದೆಹಲಿ: ‘ಮೂರು ಕೃಷಿ ಕಾಯ್ದೆಗಳ ವಿರುದ್ಧ ಹಿಂಸಾರಹಿತವಾಗಿ ‘ಸತ್ಯಾಗ್ರಹ‘ ನಡೆಸುವ ಕೃಷಿಕರ ಸಂಕಲ್ಪ ದೃಢವಾಗಿದೆ. ಆದರೆ, ಶೋಷಣೆ ಮನೋಭಾವದ ಸರ್ಕಾರಕ್ಕೆ ಇದು ಇಷ್ಟವಾಗುತ್ತಿಲ್ಲ. ಹೀಗಾಗಿಯೇ ‘ಭಾರತ್‌ ಬಂದ್‌’ ಪ್ರತಿಭಟನೆಗೆ ಕರೆ ನೀಡಲಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ ಹೇಳಿದ್ದಾರೆ.

ಕೇಂದ್ರದ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳ ವಿರುದ್ಧದ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಕಾಂಗ್ರೆಸ್‌ ಪಕ್ಷದ ರಾಜ್ಯ ಘಟಕಗಳ ಮುಖ್ಯಸ್ಥರು, ಅಧ್ಯಕ್ಷರು, ಮುಂಚೂಣಿ ಸಂಘಟನೆಗಳೂ ಪ್ರತಿಭಟನೆ ನಡೆಸಬೇಕು ಎಂದು ಹೇಳಿದ್ದಾರೆ.

ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ನೀಡಿರುವ ಕರೆಯಂತೆ ಸೋಮವಾರ ದೇಶದಾದ್ಯಂತ ನಡೆಯುವ 10 ಗಂಟೆ ಅವಧಿಯ ಈ ಮುಷ್ಕರಕ್ಕೆ ಎನ್‌ಡಿಎಯೇತರ ವಿವಿಧ ಪಕ್ಷಗಳು ಕೈಜೋಡಿಸಿವೆ.

ಪ್ರತಿಭಟನೆ ಬೆಂಬಲಿಸಿ ‘ಐ ಸ್ಟ್ಯಾಂಡ್ ವಿತ್ ಫಾರ್ಮರ್ಸ್‌’ ಹ್ಯಾಷ್‌ಟ್ಯಾಗ್‌ನೊಂದಿಗೆ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. ಮುಷ್ಕರ ನಿರತ ರೈತ ಸಂಘಟನೆಗಳೊಂದಿಗೆ ಸರ್ಕಾರ ಈಗಾಗಲೇ 11 ಸುತ್ತು ಮಾತುಕತೆ ನಡೆಸಿದ್ದು, ಫಲಪ್ರದವಾಗಿಲ್ಲ. ಜನವರಿ 26ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಳಿಕ ಚರ್ಚೆ ಮುಂದುವರಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT