ಭಾನುವಾರ, ಜನವರಿ 24, 2021
19 °C

ಭಾರತ್ ಬಯೋಟೆಕ್‌ನಿಂದ ಮತ್ತೊಂದು ಲಸಿಕೆ: ಫೆಬ್ರುವರಿ, ಮಾರ್ಚ್‌ನಲ್ಲಿ ಮಾನವ ಪ್ರಯೋಗ

ಪಿಟಿಐ Updated:

ಅಕ್ಷರ ಗಾತ್ರ : | |

Covid vaccine

ಹೈದರಾಬಾದ್: ಭಾರತ್ ಬಯೋಟೆಕ್ ಸಂಸ್ಥೆಯು ಕೋವಿಡ್‌ ಚಿಕಿತ್ಸೆಗೆ ಆಭಿವೃದ್ಧಿಪಡಿಸಲಿರುವ ಇನ್‌ಸ್ಟ್ರಾನಾಸಲ್ ಲಸಿಕೆಯ (ಮೂಗಿನ ಮೂಲಕ ನೀಡುವ) ಮೊದಲ ಹಂತದ ಪ್ರಯೋಗವನ್ನು ಫೆಬ್ರುವರಿ– ಮಾರ್ಚ್‌ನಲ್ಲಿ ಆರಂಭಿಸಲಿದೆ.

ಸಂಸ್ಥೆಯು ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ಗೆ ಈಗಾಗಲೇ ಭಾರತದ ಔಷಧ ಮಹಾ ನಿಯಂತ್ರಕರು (ಡಿಸಿಜಿಐ)  ಅನುಮೋದನೆ ನೀಡಿದ್ದಾರೆ. ಕೋವ್ಯಾಕ್ಸಿನ್ ಅಲ್ಲದೇ ಮತ್ತೊಂದು ಲಸಿಕೆ ಅಭಿವೃದ್ಧಿ ನಿಟ್ಟಿನಲ್ಲಿಯೂ ಸಂಸ್ಥೆ ಒತ್ತು ನೀಡಿದೆ. ಹೊಸ ಲಸಿಕೆ ಅಭಿವೃದ್ಧಿಗಾಗಿ ಸಂಸ್ಥೆಯು ವಾಷಿಂಗ್ಟನ್‌ ಯೂನಿವರ್ಸಿಟಿ ಸ್ಕೂಲ್ ಆಫ್‌ ಮೆಡಿಸಿನ್‌ ಜತೆಗೆ ಒಪ್ಪಂದ ಮಾಡಿಕೊಂಡಿದೆ.

ಇದನ್ನೂ ಓದಿ: 

ಬಿಬಿವಿ154 ಎಂದು ಹೆಸರಿಸಲಾದ ಮೂಗಿನ ಮೂಲಕ ನೀಡಬಹುದಾದ ಲಸಿಕೆಯ ಕ್ಲಿನಿಕಲ್ ಪೂರ್ವ ಪ್ರಯೋಗ ಆಗಿದ್ದು, ರೋಗನಿರೋಧಕ ಸಾಮರ್ಥ್ಯ ಸೇರಿದಂತೆ ವಿವಿಧ ಅಧ್ಯಯನ ನಡೆದಿದೆ.

ಈ ಅಧ್ಯಯನವನ್ನು ಭಾರತ ಮತ್ತು ಅಮೆರಿಕದಲ್ಲಿ ನಡೆಸಲಾಗಿದೆ. ಮಾನವ ಪ್ರಯೋಗದ ಮೊದಲ ಹಂತವು ಫೆಬ್ರುವರಿ–ಮಾರ್ಚ್ 2021ರಲ್ಲಿ ನಡೆಯಲಿದೆ ಎಂದು ಲಸಿಕೆ ಅಭಿವೃದ್ಧಿಪಡಿಸುವ ಸಂಸ್ಥೆಯು ತಿಳಿಸಿದೆ.

ಮೊದಲ ಹಂತದ ಮಾನವ ಪ್ರಯೋಗವನ್ನು ಭಾರತದಲ್ಲಿಯೂ ನಡೆಸಲಾಗುವುದು ಎಂದು ಭಾರತ್ ಬಯೋಟೆಕ್ ತಿಳಿಸಿದೆ. ಸೇಂಟ್‌ ಲೂಯಿಸ್ ಯೂನಿವರ್ಸಿಟಿ ವ್ಯಾಕ್ಸಿನ್ ಮತ್ತು ಚಿಕಿತ್ಸಾ ಮೌಲ್ಯಮಾಪನ ಘಟಕದಲ್ಲೂ ಪ್ರಯೋಗ ನಡೆಸಲಾಗುವುದು. ಅಮೆರಿಕ, ಜಪಾನ್, ಯುರೋಪ್ ಹೊರತುಪಡಿಸಿ ಉಳಿದೆಡೆಯ ವಿತರಣೆ ಹಕ್ಕನ್ನು ಭಾರತ್ ಬಯೋಟೆಕ್ ಹೊಂದಿದೆ ಎಂದು ತಿಳಿಸಿದರು.

ಭಾರತ್‌ ಬಯೋಟೆಕ್ ಅಧ್ಯಕ್ಷ ಕೃಷ್ಣ ಎಲ್ಲಾ ಅವರೂ, ‘ಈ ಹಿಂದೆ ಕಂಪನಿಯು ಈಗ ಇಂಟ್ರಾನಾಸಲ್ ಲಸಿಕೆ ಅಭಿವೃದ್ಧಿಗೆ ಒತ್ತು ನೀಡಲಿದೆ. ಹಾಲಿ ಅಭಿವೃದ್ಧಿಪಡಿಸಲಾಗಿರುವ ಲಸಿಕೆಯು ಎರಡು ಡೋಸ್‌ ನೀಡಬೇಕಾಗಿದೆ. ಭಾರತದಂಥ ದೇಶಕ್ಕೆ 2 ಬಿಲಿಯನ್‌ ಸಿರಿಂಜ್‌, ಸೂಜಿಗಳು ಅಗತ್ಯವಿದೆ’ ಎಂದು ಅವರು ಹೇಳಿದರು.

ಮೂಗಿನ ಮೂಲಕ ನೀಡಬಹುದಾದ ಲಸಿಕೆಯನ್ನು ನೀಡುವುದು ಸುಲಭ. ಅಲ್ಲದೆ, ಸೂಜಿ, ಸಿರಿಂಜ್‌ಗಳ ಬಳಕೆಯೂ ಕಡಿಮೆ ಆಗಲಿದೆ. ಒಟ್ಟಾರೆ, ಲಸಿಕೆ ನೀಡುವ ಅಭಿಯಾನದ ವೆಚ್ಚವನ್ನೂ ಕುಗ್ಗಿಸಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು