ಹಿಂಗೋಲಿ (ಮಹಾರಾಷ್ಟ್ರ): ಕಾಂಗ್ರೆಸ್ ಪಕ್ಷವು ಭಾನುವಾರ ‘ಭಾರತ ಜೋಡೊ’ ಯಾತ್ರೆಗೆ ಒಂದು ದಿನದ ಮಟ್ಟಿಗೆ ವಿರಾಮ ನೀಡಿದೆ. ಯಾತ್ರೆಯು ಸೋಮವಾರ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಕಲಾಮ್ನುರಿಯಿಂದ ಪುನರಾರಂಭವಾಗಿ ವಾಶಿಂ ಕಡೆಗೆ ಸಾಗಲಿದೆ.
ಇದಕ್ಕೂ ಮುನ್ನ ಶನಿವಾರ ಸಂಜೆ ಕಲಾಮ್ನುರಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು, ‘ಭಾರತವನ್ನು ವಿಭಜಿಸಲು ಸಾಧ್ಯವಿಲ್ಲ ಮತ್ತು ದ್ವೇಷವನ್ನು ಹರಡಲು ಅವಕಾಶ ನೀಡುವುದಿಲ್ಲ ಎಂಬುದೇ ಈ ನಡಿಗೆಯ ಸಂದೇಶ’ ಎಂದು ಹೇಳಿದರು.
ಭಾರತ ಜೋಡೊ ಯಾತ್ರೆಯು ಸೆ.7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿ ಶನಿವಾರದ ವರೆಗೆ 66 ದಿನಗಳನ್ನು ಪೂರೈಸಿದೆ. ಈವರೆಗೆ 6 ರಾಜ್ಯಗಳ 28 ಜಿಲ್ಲೆಗಳಲ್ಲಿ ಯಾತ್ರೆಯು ಸಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.