ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ವಿಧಾನಸಭಾ ಚುನಾವಣೆ: ಬಿಜೆಪಿ 46 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Last Updated 11 ಅಕ್ಟೋಬರ್ 2020, 19:47 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ, ಪಕ್ಷದ 46 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿಯು ಭಾನುವಾರ ಪ್ರಕಟಿಸಿದೆ. ಆ ಮೂಲಕ ಒಟ್ಟಾರೆ 75 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಅಂತಿಮಗೊಳಿಸಿದಂತಾಗಿದೆ.

ಇಲ್ಲಿ ನಡೆದ ಪಕ್ಷದ ಕೇಂದ್ರೀಯ ಆಯ್ಕೆ ಸಮಿತಿಯ ಸಭೆಯ ನಂತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ರಾಜ್ಯದ ಸಚಿವ ನಂದಕಿಶೋರ್‌ ಯಾದವ್‌ (ಪಟ್ನಾಸಾಹಿಬ್‌ ಕ್ಷೇತ್ರ), ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಅವರ ಪುತ್ರ ನಿತೀಶ್‌ ಮಿಶ್ರಾ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬಿಹಾರದಲ್ಲಿ ಜೆಡಿಯು ಹಾಗೂ ಬಿಜೆಪಿ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದು, ಜೆಡಿಯು 122 ಹಾಗೂ ಬಿಜೆಪಿಯು 121 ಕ್ಷೇತ್ರಗಳನ್ನು ಹಂಚಿಕೊಂಡಿವೆ. ತನ್ನ ಪಾಲಿನ ಕ್ಷೇತ್ರಗಳಲ್ಲಿ 11 ಕ್ಷೇತ್ರಗಳನ್ನು ಬಿಜೆಪಿಯು ವಿಐಪಿ ಪಕ್ಷಕ್ಕೆ ಬಿಟ್ಟುಕೊಡಲಿದೆ.

ಇಂದಿನಿಂದ ನಿತೀಶ್‌ ಪ್ರಚಾರ

ಪಟ್ನಾ: ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ಸೋಮವಾರದಿಂದ ಚುನಾವಣಾ ಪ್ರಚಾರ ಕಾರ್ಯವನ್ನು ನಡೆಸಲಿದ್ದಾರೆ.

ಮೊದಲ ಹಂತದಲ್ಲಿ (ಅ. 28ರಂದು) ಚುನಾವಣೆಯನ್ನು ಎದುರಿಸಲಿರುವ 11 ವಿಧಾನಸಭಾ ಕ್ಷೇತ್ರಗಳ ಮತದಾರರನ್ನುದ್ದೇಶಿಸಿ ಅವರು ಸೋಮವಾರ ಸಂಜೆ ವರ್ಚುವಲ್‌ ರ್‍ಯಾಲಿಯ ಮೂಲಕ ಮಾತನಾಡಲಿದ್ದಾರೆ. ಮಂಗಳವಾರ ಬೆಳಿಗ್ಗೆ ಇನ್ನೂ 11 ಕ್ಷೇತ್ರಗಳ ಹಾಗೂ ಸಂಜೆ 13 ಕ್ಷೇತ್ರಗಳ ಮತದಾರರನ್ನುದ್ದೇಶಿಸಿ ಮಾತನಾಡುವರು’ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

‘ಮುಂದಿನ ಎರಡು ದಿನಗಳಲ್ಲಿ ನಿತೀಶ್‌ ಅವರು ವರ್ಚುವಲ್‌ ರ್‍ಯಾಲಿಗಳ ಮೂಲಕ 35ಕ್ಕೂ ಹೆಚ್ಚು ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅ.14ರ ನಂತರ ಅವರು ರಾಜ್ಯದ ವಿವಿಧ ಭಾಗಗಳಿಗೆ ಸಂಚರಿಸಿ ರ್‍ಯಾಲಿಗಳಲ್ಲಿ ಪಾಲ್ಗೊಳ್ಳುವರು’ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಜಯ್‌ ಕುಮಾರ್‌ ಝಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT