ಶುಕ್ರವಾರ, ಜನವರಿ 27, 2023
17 °C

‘ಒಂದು ದೇಶ, ಒಂದು ವಿದ್ಯುತ್ ದರ' ನೀತಿಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ: 'ಒಂದು ದೇಶ, ಒಂದು ವಿದ್ಯುತ್ ದರ' ನೀತಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಒತ್ತಾಯಿಸಿದ್ದಾರೆ.

ಬಿಹಾರದಲ್ಲಿ ₹ 15,871 ಕೋಟಿ ಮೌಲ್ಯದ ವಿದ್ಯುತ್ ಯೋಜನೆಗಳನ್ನು ಬುಧವಾರ ಅನಾವರಣಗೊಳಿಸಿ ಅವರು ಮಾತನಾಡಿದರು. 

ರಾಜ್ಯ ಸರ್ಕಾರಗಳ ವಿದ್ಯುತ್‌ ಖರೀದಿಯಲ್ಲಿ ಬಹಳ ವ್ಯತ್ಯಾಸವಿದೆ. ಕೆಲವು ರಾಜ್ಯಗಳು ಕಡಿಮೆ ಬೆಲೆಗೆ ವಿದ್ಯುತ್‌ ಖರೀದಿ ಮಾಡಿದರೆ, ಮತ್ತೆ ಕೆಲವು ರಾಜ್ಯಗಳು ಹೆಚ್ಚಿನ ಬೆಲೆಗೆ ವಿದ್ಯುತ್‌ ಖರೀದಿ ಮಾಡುತ್ತಿವೆ. ಹಾಗಾಗಿ ಕೇಂದ್ರ ಸರ್ಕಾರ  'ಒಂದು ದೇಶ, ಒಂದು ವಿದ್ಯುತ್ ದರ' ನೀತಿಯನ್ನು ಜಾರಿಗೆ ತರಬೇಕು ಎಂದು ಪ್ರತಿಪಾದಿಸಿದರು.

ಎಲ್ಲ ರಾಜ್ಯಗಳು ದೇಶದ ಒಟ್ಟಾರೆ ಬೆಳವಣಿಗೆಯಲ್ಲಿ ಭಾಗವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ‘ಒಂದು ರಾಷ್ಟ್ರ, ಒಂದು ವಿದ್ಯುತ್ ದರ ನೀತಿ ಇರಬೇಕು ಎಂದು ಅವರು ಹೇಳಿದ್ದಾರೆ. ಪಾರದರ್ಶಕತೆಗಾಗಿ ಬಿಹಾರದಲ್ಲಿ ಸ್ಮಾರ್ಟ್ ಪ್ರಿಪೇಯ್ಡ್ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಲು ಸರ್ಕಾರ ನಿರ್ಧರಿಸಿದೆ ಎಂದು ನಿತೀಶ್ ಕುಮಾರ್ ಕುಮಾರ್‌ ಹೇಳಿದರು.

2005ರಲ್ಲಿ ನಾನು ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಕೇವಲ 700 ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗುತ್ತಿತ್ತು, ಈಗ ಅದು 6,738 ಮೆಗಾವ್ಯಾಟ್‌ಗೆ ಏರಿಕೆಯಾಗಿದೆ ಎಂದು ನಿತೀಶ್ ಕುಮಾರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು