ಗುರುವಾರ , ಮೇ 19, 2022
24 °C

ಪ್ರಶಾಂತ್ ಕಿಶೋರ್ ಹೇಳಿಕೆಗೆ ಪ್ರಾಮುಖ್ಯತೆ ನೀಡುವುದಿಲ್ಲ: ನಿತೀಶ್ ಕುಮಾರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಟ್ನಾ (ಪಿಟಿಐ): ‘ಬಿಹಾರದಲ್ಲಿ ನನ್ನ ನೇತೃತ್ವದ ಆಡಳಿತವನ್ನು ಕುರಿತಂತೆ ರಾಜಕೀಯ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ನೀಡಿರುವ ಹೇಳಿಕೆಗೆ ನಾನು ಅಷ್ಟು ಪ್ರಾಮುಖ್ಯತೆ ನೀಡುವುದಿಲ್ಲ’ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

‘ಜನ್ ಸುರಾಜ್‌’ ವೇದಿಕೆಯನ್ನು ಆರಂಭಿಸಿರುವ ಪ್ರಶಾಂತ್‌ ಕಿಶೋರ್, ‘ಬಿಹಾರದಲ್ಲಿ ಪರಿವರ್ತನೆ ತರುವುದು, ರಾಜ್ಯದಲ್ಲಿ ರಾಜಕೀಯವಾಗಿ ಪರ್ಯಾಯವನ್ನು ನೀಡುವುದು ತಮ್ಮ ಉದ್ದೇಶ ಎಂದು ಹೇಳಿದ್ದರು.

‘ಯಾರೋ ಏನೋ ಹೇಳಿದ್ದಕ್ಕೆ ನಾನು ಪ್ರಾಮುಖ್ಯತೆ ಕೊಡುವುದಿಲ್ಲ. ಜನರ ನಿರೀಕ್ಷೆಗಳಿಗೆ ನನ್ನ ಆಡಳಿತವು ಸ್ಪಂದಿಸಿದೆಯೇ ಎಂಬುದನ್ನು ನೀವು (ಮಾಧ್ಯಮ) ನಿರ್ಧರಿಸಬೇಕು‘ ಎಂದು ನಿತೀಶ್‌ ಕುಮಾರ್‌ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು