ಪಟನಾ: 'ಸೈಕಲ್ ಗರ್ಲ್' ಎಂದು ಗುರುತಿಸಿಕೊಂಡಿದ್ದ ಬಿಹಾರದ ಚಿಕ್ಕ ಹುಡುಗಿ ಜ್ಯೋತಿ ಕುಮಾರಿ ಅವರ ತಂದೆ ಮೋಹನ್ ಪಾಸ್ವನ್ ಸೋಮವಾರ ಹೃದಯ ಸ್ತಂಭನದಿಂದ ಸಾವನಪ್ಪಿದ್ದಾರೆ. ದರ್ಬಂಗ ಜಿಲ್ಲೆಯ ಸ್ವಗ್ರಾಮ ಸಿರ್ಹುಲ್ಲಿಯಲ್ಲಿ ಘಟನೆ ಸಂಭವಿಸಿದೆ.

ಕಳೆದ ವರ್ಷ ಲಾಕ್‌ಡೌನ್ ಘೋಷಣೆಯಾದಾಗ 13 ವರ್ಷದ ಹುಡುಗಿ ಜ್ಯೋತಿ ಕುಮಾರಿ 1,200 ಕಿ.ಮೀ ದೂರದ ಊರಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ಬೈಸಿಕಲ್ ಮೇಲೆ ಕುಳ್ಳಿರಿಸಿಕೊಂಡು ಬಂದಿದ್ದರು. ಸಾಮಾಜಿಕ ತಾಣಗಳಲ್ಲಿ ಜ್ಯೋತಿ ಕುಮಾರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಜ್ಯೋತಿ ಕುಮಾರಿಯನ್ನು 'ಶ್ರವಣ ಕುಮಾರ'ನ ಪ್ರತಿರೂಪ ಎಂದು ಬಣ್ಣಿಸಲಾಗಿತ್ತು. ಅಮೆರಿಕದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಅವರು ಶ್ಲಾಘಿಸಿದ್ದರು. ಅಧಿಕಾರಿಗಳು ಜ್ಯೋತಿಗೆ ಕ್ರೀಡಾ ಬೈಸಿಕಲ್‌ಅನ್ನು ಕೊಡುಗೆಯಾಗಿ ನೀಡಿದ್ದರು. ಅನೇಕ ಸಹೃದಯರು ಆಕೆಗೆ ಸಹಾಯ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.