ಬಿಟ್ಕಾಯಿನ್ ಹಗರಣ: ಜನರಿಗೆ ₹2.5 ಕೋಟಿ ವಂಚಿಸಿದ ವ್ಯಕ್ತಿ ಬಂಧನ

ನವದೆಹಲಿ: ಬಿಟ್ಕಾಯಿನ್ನಲ್ಲಿ ಹೂಡಿಕೆ ಮಾಡುವುದಾಗಿ ಹೇಳಿ ನೂರಾರು ಜನರಿಗೆ ₹ 2.5 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಉಮೇಶ್ ವರ್ಮಾ (60) ಬಂಧಿತ ಆರೋಪಿ. ದುಬೈನಿಂದ ಹಿಂದಿರುಗಿದ ವರ್ಮಾ ಅವರನ್ನು ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿದೆ.
ಈವರೆಗೆ ವರ್ಮಾ ವಿರುದ್ಧ 45 ಜನರು ದೂರು ನೀಡಿದ್ದಾರೆ. ವರ್ಮಾ ಹಾಗೂ ಆತನ ಮಗ ಭರತ್ ವರ್ಮಾ ಪ್ಲುಟೊ ಎಕ್ಸ್ಚೇಂಜ್ ಹೆಸರಿನಲ್ಲಿ ಕಂಪನಿ ಸ್ಥಾಪಿಸಿ, ಬಿಟ್ಕಾಯಿನ್ನಲ್ಲಿ ಹೂಡಿಕೆ ಮಾಡುವ ಯೋಜನೆ ಹೆಸರಿನಲ್ಲಿ ಹಣ ಸಂಗ್ರಹಿಸಿ, ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಪ್ರತಿ ತಿಂಗಳು ಶೇ 20–30ರಷ್ಟು ಲಾಭ ನೀಡುವುದಾಗಿ ಆರೋಪಿಗಳು ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿದಂತೆ ಯಾವುದೇ ಲಾಭ ನೀಡಲಿಲ್ಲ. ಕೆಲವು ದಿನಗಳ ನಂತರ ಕಚೇರಿಗಳನ್ನು ಬಂದ್ ಮಾಡಿದರು. ತಮ್ಮ ವಾಸಸ್ಥಳದ ವಿಳಾಸವನ್ನೂ ಪದೇಪದೇ ಬದಲಾಯಿಸುತ್ತಿದ್ದ ಅವರು ಕೊನೆಗೆ ದುಬೈಗೆ ಓಡಿ ಹೋದರು’ ಎಂದೂ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.