ನವದೆಹಲಿ: ತಿಹಾರ ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ಸಚಿವ ಸತ್ಯೇಂದ್ರ ಜೈನ್ ಅವರ ಮತ್ತೊಂದು ವಿಡಿಯೊ ಬಹಿರಂಗಗೊಂಡಿರುವ ಬೆನ್ನಲ್ಲೇ ಬಿಜೆಪಿ ವಿಡಿಯೊ ನಿರ್ಮಾಣ ಕಂಪನಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಜ್ರಿವಾಲ್, ಪ್ರತಿ ವಾರ್ಡ್‌ನಲ್ಲಿ ವಿಡಿಯೊ ಅಂಗಡಿ ತೆರೆಯುವುದು ದೆಹಲಿ ಜನತೆಗೆ ಬಿಜೆಪಿಯ ಹೊಸ ಭರವಸೆ. ಬಿಜೆಪಿ ಒಂದು ವಿಡಿಯೊ ನಿರ್ಮಾಣ ಕಂಪನಿ. ಈ ಚುನಾವಣೆಯಲ್ಲಿ ಸಾರ್ವಜನಿಕರು ಅವರಿಗೆ ವಿಡಿಯೊ ಮಾಡುವ ಜವಾಬ್ದಾರಿ ಹಾಗೂ ಶಾಲೆ, ಆಸ್ಪತ್ರೆ ಕಟ್ಟಿಸುವವರಿಗೆ ಸರ್ಕಾರ ನಡೆಸುವ ಜವಾಬ್ದಾರಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಜೈಲಿನಲ್ಲಿರುವ ಸತ್ಯೇಂದ್ರ ಜೈನ್ ಅವರ ಕೊಠಡಿ ಸ್ವಚ್ಛಗೊಳಿಸುತ್ತಿರುವುದು, ಸಚಿವರ ಹಾಸಿಗೆ ಸರಿಪಡಿಸುತ್ತಿರುವ ಹೊಸ ವಿಡಿಯೊ ಎಲ್ಲೆಡೆ ಹರಿದಾಡಿದೆ. ಇದು ಎಎನ್‌ಐ ಸುದ್ದಿ ಸಂಸ್ಥೆ ಬಿತ್ತರಿಸುವ ಜೈಲಿನ ನಾಲ್ಕನೆ ವಿಡಿಯೊವಾಗಿದ್ದು, ಬಿಜೆಪಿ ನಾಯಕರು ಅದನ್ನು ಬಹಳ ಉತ್ಸಾಹದಿಂದ ಎಲ್ಲೆಡೆ ಹಂಚುತ್ತಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸತ್ಯೇಂದ್ರ ಜೈನ್ ಅವರಿಗೆ ಮಸಾಜ್ ಮಾಡುತ್ತಿರುವ ವಿಡಿಯೊ ಹರಿದಾಡಿತ್ತು. ಬಳಿಕ ಜೈನ್ ಜೈಲಿನ ಕೊಠಡಿಯಲ್ಲಿ ಹೊರಗಿನ ಊಟ ಸೇವಿಸುತ್ತಿರುವ ವಿಡಿಯೊ ಬಿಡುಗಡೆಗೊಂಡಿತ್ತು. ಬಳಿಕ ಜೈನ್ ತಮ್ಮ ಕೊಠಡಿಯಲ್ಲಿ ಇತರರೊಂದಿಗೆ ಮಾತುಕತೆ ನಡೆಸುತ್ತಿರುವ ವಿಡಿಯೊ ಬಹಿರಂಗವಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.