ಶನಿವಾರ, ಅಕ್ಟೋಬರ್ 24, 2020
28 °C

ಅನುದಾನಿತ ಮದರಸಾ, ಸಂಸ್ಕೃತ ಕಲಿಕಾ ಕೇಂದ್ರ ಮುಚ್ಚಲು ಅಸ್ಸಾಂ ಸರ್ಕಾರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿ: ಮುಸ್ಲಿಮ್‌ ಸಂಘ ಸಂಸ್ಥೆಗಳ ಆಕ್ಷೇಪಣೆಗಳ ನಡುವೆಯೂ ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರ ಮುಂದಿನ ತಿಂಗಳಿನಿಂದ ಸರ್ಕಾರಿ ಅನುದಾನಿತ ಮದರಸಾಗಳನ್ನು ಮುಚ್ಚಲು ನಿರ್ಧರಿಸಿದೆ.

‘ಸರ್ಕಾರದಿಂದ ಧನಸಹಾಯ ಪಡೆದ ಎಲ್ಲಾ ಮದರಸಾಗಳನ್ನು ಸ್ಥಗಿತಗೊಳಿಸಲು ಮುಂದಿನ ತಿಂಗಳು ಅಧಿಸೂಚನೆ ಹೊರಡಿಸಲಾಗುವುದು. ಧಾರ್ಮಿಕ ಶಿಕ್ಷಣವನ್ನು ಸರ್ಕಾರದ ಹಣದಲ್ಲಿ ನಡೆಸುವುದನ್ನು ನಾವು ವಿರೋಧಿಸುತ್ತೇವೆ. ಆದರೆ ಖಾಸಗಿ ಧನಸಹಾಯದೊಂದಿಗೆ ನಡೆಯುವುದನ್ನು ನಾವು ತಡೆಯಲು ಸಾಧ್ಯವಿಲ್ಲ’ ಎಂದು ಅಸ್ಸಾಂ ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದರು.

ಇದರ ಜೊತೆಗೆ, ರಾಜ್ಯ ಸರ್ಕಾರದ ಧನಸಹಾಯ ‍ಪಡೆಯುವ ಎಲ್ಲಾ ಸಂಸ್ಕೃತ ಕಲಿಕಾ ಕೇಂದ್ರಗಳನ್ನೂ ಇದೇ ರೀತಿ ಮುಚ್ಚಲು ಮತ್ತೊಂದು ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದೂ ಶರ್ಮಾ ಹೇಳಿದರು.

ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ 2021ಕ್ಕೆ ನಿಗದಿಯಾಗಿದೆ. ಇದೇ ಕಾರಣಕ್ಕೆ ಮುಂದಿನ ತಿಂಗಳಿನಿಂದ ಎಲ್ಲಾ ಮದರಸಾಗಳನ್ನು ಮುಚ್ಚುವ ನಿರ್ಧಾವನ್ನು ಶರ್ಮಾ ಸರ್ಕಾರ ಕೈಗೊಂಡಿದೆ. ಇದು ರಾಜಕೀಯ ಲಾಭ ಪಡೆಯುವ ಹುನ್ನಾರ ಎಂದು ಮುಸ್ಲಿಂ ಸಂಘಟನೆಗಳು ಆರೋಪಿಸಿವೆ.

ಅಸ್ಸಾಂನಲ್ಲಿ 614 ಸರ್ಕಾರಿ ಮದರಸಾಗಳು ಮತ್ತು ಸುಮಾರು 900 ಖಾಸಗಿ ಮದರಸಾಗಳಿವೆ. ಮತ್ತೊಂದೆಡೆ, ಸುಮಾರು 100 ಸರ್ಕಾರಿ ಸಂಸ್ಕೃತ ಕಲಿಕಾ ಕೇಂದ್ರಗಳಿವೆ. 500 ಕ್ಕೂ ಹೆಚ್ಚು ಖಾಸಗಿ ಕಲಿಕಾ ಕೇಂದ್ರಗಳಿವೆ.

ರಾಜ್ಯದ ಮದರಸಾಗಳಿಗಾಗಿ ಸರ್ಕಾರವು ವರ್ಷಕ್ಕೆ ಸುಮಾರು ₹3 ರಿಂದ ₹4 ಕೋಟಿ ನೀಡುತ್ತಿದೆ. ಸಂಸ್ಕೃತ ಕಲಿಕಾ ಕೇಂದ್ರಗಳಿಗಾಗಿ ₹1 ಕೋಟಿ ಖರ್ಚು ಮಾಡುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು