ಭಾನುವಾರ, ಜುಲೈ 3, 2022
28 °C

ಬಿಜೆಪಿಯು ದೊಡ್ಡ ಉದ್ಯಮಿಗಳಿಗಾಗಿ ಮಾತ್ರ ಕೆಲಸ ಮಾಡುತ್ತಿದೆ: ಪ್ರಿಯಾಂಕಾ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

ರಾಯ್‌ಬರೇಲಿ: ಸಾಮಾನ್ಯ ಜನರ ಸೇವೆ ಮಾಡಬೇಕೆಂಬ ‘ರಾಜ ಧರ್ಮ’ವನ್ನು ಬಿಜೆಪಿ ಮರೆತಿದೆ. ಕೇವಲ ದೊಡ್ಡ ಉದ್ಯಮಿಗಳಿಗಾಗಿ ಮಾತ್ರ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.

ರಾಯ್‌ಬರೇಲಿಯ ಜಗತ್‌ಪುರದಲ್ಲಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತಗಳನ್ನು ಪಡೆಯುವುದಕ್ಕಾಗಿ ಧರ್ಮ ಮತ್ತು ಜಾತಿಯನ್ನು ಬಳಸುವವರನ್ನು ಜನರು ಗಮನಿಸಬೇಕು ಎಂದರು.

ಬಿಜೆಪಿ ನಾಯಕರು ಜನರ ಸೇವೆ ಮಾಡುವುದು ತಮ್ಮ ಧರ್ಮ ಎಂಬುದನ್ನು ಮರೆತಿದ್ದಾರೆ. ಅವರಿಗೆ ಧರ್ಮ ಎಂಬುದು ಮತ ಗಳಿಕೆಗಾಗಿ ಜನರನ್ನು ಪ್ರಚೋದಿಸುವ ತಂತ್ರವಾಗಿಬಿಟ್ಟಿದೆ. ಬಿಜೆಪಿ ಸರ್ಕಾರವು ಜನರ ಸೇವೆ ಮಾಡಬೇಕೆಂಬ ರಾಜ ಧರ್ಮವನ್ನು ಮರೆತಿದೆ ಎಂದು ಅವರು ಟೀಕಿಸಿದ್ದಾರೆ.

ನಿರುದ್ಯೋಗ, ಹಣದುಬ್ಬರದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಅಡುಗೆ ಅನಿಲದ ಸಿಲಿಂಡರ್ ಮತ್ತು ಸಾಸಿವೆ ಎಣ್ಣೆ ಬೆಲೆ ಏರಿಕೆ ಬಗ್ಗೆಯೂ ಉಲ್ಲೇಖಿಸಿದ್ದಾರೆ.

‘ನೀವು ದಿನಕ್ಕೆ ₹200 ಸಂಪಾದಿಸಿದರೆ ಒಂದು ಬಾಟಲ್ ಸಾಸಿವೆ ಎಣ್ಣೆಗೆ ₹240 ನೀಡಬೇಕಾಗಿದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು